ಸುಳ್ಯ:ಕಾಂಗ್ರೆಸ್ ಅಭ್ಯರ್ಥಿ ಜಿ. ಕೃಷ್ಣಪ್ಪ ಅವರ ಚುನಾವಣಾ ಪ್ರಚಾರದ ಅಂಗವಾಗಿ ಗ್ರಾಮ ಭೇಟಿ ಕಾರ್ಯಕ್ರಮ ಇಂದಿನಿಂದ ಆರಂಭಗೊಂಡಿದೆ.
ಇದರ ಅಂಗವಾಗಿ ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡರು. ಮತದಾರರ ಭೇಟಿ, ಕಾರ್ಯಕರ್ತರ ಸಭೆ, ಮತ್ತು
ರೋಡ್ ಶೋ ನಡೆಸಿದರು. ಸಂಪಾಜೆಯಲ್ಲಿ ಗ್ರಾಮ ಭೇಟಿ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಸಂಪಾಜೆ, ಅರಂತೋಡುಗಳಲ್ಲಿ
ರೋಡ್ ಶೋ ನಡೆಸಿ ಪ್ರಚಾರ ನಡೆಸಿದರು. ದಿನಪೂರ್ತಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದ ಜಿ.ಕೃಷ್ಣಪ್ಪ
ಸಂಪಾಜೆ, ಆರಂತೋಡು, ಉಬರಡ್ಕ ಮಿತ್ತೂರು, ಅಲೆಟ್ಟಿ, ಅಜ್ಜಾವರ,ಮಂಡೆಕೋಲು, ಕನಕಮಜಲು, ಜಾಲ್ಸುರು, ಗ್ರಾಮಗಳಲ್ಲಿ ಭೇಟಿ ನೀಡಿ ಚುನಾವಣಾ ನಡೆಸಿದರು. ವಿವಿಧ ಕಡೆ
ಮತದಾರರ, ಕಾರ್ಯಕರ್ತರ ಭೇಟಿ ಮಾಡಲಾಯಿತು. ರೋಡ್ ಶೋ ನಡೆಸಲಾಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಜಿಲ್ಲಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್, ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್, ಸುಳ್ಯ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಸೋಮಶೇಖರ ಕೊಯಿಂಗಾಜೆ, ಮಹಮ್ಮದ್ ಕುಂಞಿ ಗೂನಡ್ಕ, ಪಿ.ಎ.ಮಹಮ್ಮದ್, ರಹೀಂ ಬೀಜದಕಟ್ಟೆ, ಅಬೂಸಾಲಿ, ಶೌವಾದ್ ಗೂನಡ್ಕ, ಎಸ್.ಕೆ.ಹನೀಫ್ ಮತ್ತಿತರರು ಉಪಸ್ಥಿತರಿದ್ದರು