ಸುಳ್ಯ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪರವಾನಿಗೆ ಹೊಂದಿದ ಆಯುಧಗಳನ್ನು ಠೇವಣಿಯಿಂದ ವಿನಾಯಿತಿ ನೀಡುವ ಬಗ್ಗೆ ಸುಳ್ಯ ತಾಲೂಕಿನಿಂದ 578 ಅರ್ಜಿದಾರ ಕೃಷಿಕರು ಅರ್ಜಿ ಸಲ್ಲಿಸಿದರು. ಆದರೆ ಕೇವಲ ಶೇ.40 ರಷ್ಟು ಮಂದಿಗೆ ಮಾತ್ರ ವಿನಾಯತಿ ನೀಡಲಾಗಿದೆ. ಅರ್ಹ ಕೃಷಿಕರನ್ನು ವಿನಾಯಿತಿಯಿಂದ ಕೈ ಬಿಡಲಾಗಿರುವುದು ಮತ್ತು
ಕೆಲವೊಂದು ಗ್ರಾಮಗಳಲ್ಲಿ ಒಬ್ಬ ಕೃಷಿಕನಿಗೂ ವಿನಾಯಿತಿ ನೀಡದಿರುವುದು ಖಂಡನೀಯ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಪಿ.ಎಸ್.ಗಂಗಾಧರ್ ಹೇಳಿದ್ದಾರೆ.ಪೂಮಲೆ ರಕ್ಷಿತಾರಣ್ಯದ ಬುಡದಲ್ಲಿ ವಾಸಿಸುವ ಜನರಿಗೂ ವಿನಾಯಿತಿ ನೀಡಿಲ್ಲ. ಅವಕಾಶ ವಂಚಿತ ಉಬರಡ್ಕ ಮಿತ್ತೂರು, ಮರ್ಕಂಜ, ನೆಲ್ಲೂರು ಕೆಮ್ರಾಜೆ, ಗ್ರಾಮಗಳ ಅರ್ಜಿದಾರರ ಮನವಿಯನ್ನು ಜಿಲ್ಲಾಧಿಕಾರಿಗಳು ಮರುಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ಬಗ್ಗೆ ಡಿ.ಸಿ.ಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.