ಪಂಜ:ಶಿವಾಜಿ ಯುವಕ ಮಂಡಲ ಕೂತ್ಕುಂಜ, ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್
ಇವರ ಸಹಭಾಗಿತ್ವದಲ್ಲಿ ಪ್ರೋ ಮಾದರಿಯ ಸುಳ್ಯ ವಿಧಾನಸಭಾ ಕ್ಷೇತ್ರದ 8 ತಂಡಗಳ ಸೂರ್ಯ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಕೂತ್ಕುಂಜ ಅಟಲ್ ಜೀ ಕ್ರೀಡಾಂಗಣದಲ್ಲಿ ನಡೆಯಿತು.ಶಾಸಕಿ ಭಾಗೀರಥಿ ಮುರುಳ್ಯ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.ಅತಿಥಿಗಳಾಗಿ
ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮಿ ಜಳಕದಹೊಳೆ ,ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ ನೆಕ್ರಾಜೆ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ, ಯುವ ಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ, ಮಹಾರಾಷ್ಟ್ರ ಗೌಡರ ಸಿಂಧೂರ್ ರಾಜೇಶ್ ಗೌಡ, ಪ್ರವೀಣ್ ಕುಂಟ್ಯಾನ, ದೇವಿಪ್ರಸಾದ್ ಚಿಕ್ಮುಳಿ, ರಾಧಾಕೃಷ್ಣ ಪೈಸಾರಿ, ಹೊನ್ನಪ್ಪ ಗೌಡ ಚಿದ್ಗಲ್ಲು ಶುಭ ಹಾರೈಸಿದರು. ಶಿವಾಜಿ ಯುವಕ ಮಂಡಲದ ಅಧ್ಯಕ್ಷ ಆದರ್ಶ ಚಿದ್ಗಲ್ಲು ಸಭಾಧ್ಯಕ್ಷತೆ ವಹಿಸಿದ್ದರು.

ಶಿವಾಜಿ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಯೋಗೀಶ್ ಚಿದ್ಗಲ್ಲು, ನಿಕಟಪೂರ್ವಾಧ್ಯಕ್ಷ ದೇವಿಪ್ರಸಾದ್ ಕುಳ್ಳಾಜೆ, ಕಾರ್ಯಕ್ರಮ ನಿರ್ದೇಶಕ ತೇಜಸ್ ಗುಂಡಿಮಜಲು, ಕಾರ್ಯದರ್ಶಿ ಲಿಖಿತ್ ಅಜ್ಜಿಹಿತ್ಲು , ಕ್ರೀಡಾ ಕಾರ್ಯದರ್ಶಿ ನಿಧೀಶ್ ಕಕ್ಯಾನ, ಕಬಡ್ಡಿ ತಂಡಗಳ ಮಾಲಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಬಡ್ಡಿ ಪಂದ್ಯಾಟದಲದಲಿ
ಪಂಚಶ್ರೀ ಯುವಕ ಮಂಡಲ ಪಂಬೆತ್ತಾಡಿ ಪ್ರಥಮ, ವೀರ ಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ದ್ವಿತೀಯ, ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಪಂಜ ತೃತೀಯ , ಕೋಟಿ ಚೆನ್ನಯ ಫ್ರೆಂಡ್ಸ್ ಎಣ್ಮೂರು ಚತುರ್ಥ ಸ್ಥಾನ ಪಡೆದುಕೊಂಡಿತು. ದಿವಾಕರ ಉಪ್ಪಳ, ಪ್ರಸಾದ್ ಕಾಟೂರು ವೀಕ್ಷಕ ವಿವರಣೆ ನೀಡಿದರು.












