ಸುಳ್ಯ:ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ (ಕೆಎನ್ಎಸ್ಎಸ್) ಸುಳ್ಯ ಕರಯೋಗಂ ವತಿಯಿಂದ ಓಣಂ ಆಚರಣೆ, ಕುಟುಂಬ ಸಮ್ಮಿಲನ ಹಾಗೂ ಸಾಂಸ್ಕೃತಿಕ ಸಂಭ್ರಮ ಸುಳ್ಯ ಲಯನ್ಸ್ ಸಭಾಂಗಣದಳಲ್ಲಿ ನಡೆಯಿತು. ಕೆಎನ್ಎಸ್ಎಸ್ ವೈಸ್ ಚೆಯರ್ಮೆನ್ ಪಿ.ಕೆ.ಎಸ್.ಪಿಳ್ಳೈ ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಕೆಎನ್ಎಸ್ಎಸ್ ಸುಳ್ಯ ಕರಯೋಗಂ ಅಧ್ಯಕ್ಷ ಭಾಸ್ಕರನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ‘ಓಣಂ ಅಂದು ಇಂದು’ ಎಂಬ ವಿಷಯದ
ಬಗ್ಗೆ ಕರಯೋಗಂ ಮಾಜಿ ಕಾರ್ಯದರ್ಶಿ ಚಂದ್ರಮೋಹನ್ ಮಾತನಾಡಿದರು. ಫೆಡರಲ್ ಬ್ಯಾಂಕ್ ಹಿರಿಯ ವ್ಯವಸ್ಥಾಪಕರಾದ ನಿತಿನ್ ಗಂಗಾಧರನ್ ನಂಬಿಯಾರ್, ಮಂಗಳೂರು ಕರಯೋಗಂ ಮಾಜಿ ಅಧ್ಯಕ್ಷ ಮುರಳಿ ಹೆಚ್ ಅತಿಥಿಗಳಾಗಿದ್ದರು.
ಸುಳ್ಯ ಕರಯೋಗಂ ಕಾರ್ಯದರ್ಶಿ ಬಾಲಕೃಷ್ಣನ್ ನಾಯರ್ ಎಸ್ಬಿ ಲ್ಯಾಬ್, ಕೋಶಾಧಿಕಾರಿ ಕೆ.ಪ್ರಭಾಕರನ್ ನಾಯರ್ ಸ್ವಾಗತ್, ಚಂದ್ರಶೇಖರನ್ ನಾಯರ್, ಗಣೇಶನ್ ನಾಯರ್, ಪದ್ಮನಾಭನ್ ನಾಯರ್, ವಿಶ್ವನಾಥನ್ ನಾಯರ್, ಸಿ.ಎಚ್.ಪ್ರಭಾಕರನ್ ಮಾತನಾಡಿದರು.ಪತ್ರಕರ್ತ ದುರ್ಗಾಕುಮಾರ್ ನಾಯರ್ಕೆರೆ, ಅರುಣಾ ಪ್ರಮೋದ್, ಅಂಬಿಕಾ ಚಂದ್ರಶೇಖರನ್ ಕಾರ್ಯಕ್ರಮ ನಿರೂಪಿಸಿದರು.
ಹೂರಂಗೋಲಿ, ಓಣಂ ಸದ್ಯ ಏರ್ಪಡಿಸಲಾಗಿತ್ತು. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಓಣಂ ಆಚರಣೆಯ ಮೆರುಗು ನೀಡಿತು. ಓಣಂ ಆಚರಣೆಯ ಜೊತೆಗೆ ಕೆಎನ್ಎಸ್ಎಸ್ ಸುಳ್ಯ ಕರಯೋಗಂ ವಾರ್ಷಿಕ ಮಹಾಸಭೆ, ಕುಟುಂಬ ಸಮ್ಮಿಲನ ಕಾರ್ಯಕ್ರಮ ಜರುಗಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸ್ಕಾಲರ್ಶಿಪ್ ವಿತರಿಸಲಾಯಿತು.