ಅಹ್ಮದಾಬಾದ್:ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಮೊದಲ ಫ್ಲೇ ಆಫ್ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಫೈನಲ್ ಪ್ರವೇಶಿಸಿತು. ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎಂಟು ವಿಕೆಟ್ಗಳಿಂದ ಮಣಿಸಿದ ಕೆಕೆಆರ್ ಪ್ರಥಮ ತಂಡವಾಗಿ ಫೈನಲ್ ಪ್ರವೇಶಿಸಿತು. ಕೋಲ್ಕತ್ತಾ ನಾಲ್ಕನೇ ಬಾರಿ ಫೈನಲ್ ಪ್ರವೇಶಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ
ಹೈದರಾಬಾದ್ ತಂಡ 19.3 ಓವರ್ಗಳಲ್ಲಿ ತನ್ನ ಎಲ್ಲ ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಕೋಲ್ಕತ್ತಾ 13.4 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ164 ರನ್ ಗಳಿಸಿತು. ನಾಯಕ ಶ್ರೇಯಸ್ ಅಯ್ಯರ್ ಹಾಗೂ ವೆಂಕಟೇಶ್ ಅಯ್ಯರ್ ಅರ್ಧ ಶತಕ ಸಿಡಿಸಿ ಸುಲಭ ಗೆಲುವು ದಾಖಲಿಸಲು ನೆರವಾದರು. ಶ್ರೇಯಸ್ ಅಯ್ಯರ್ 24 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 58 ರನ್ ಬಾರಿಸಿದರು. ವೆಂಕಟೇಶ್ ಅಯ್ಯರ್ 28 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 51 ರನ್ ಬಾರಿಸಿದರು. ಆರ್ ಗುರ್ಬಾಸ್ 23, ಎಸ್.ನರೈನ್ 21 ರನ್ ಬಾರಿಸಿದರು.
ಮೊದಲು ಬ್ಯಾಟ್ ಮಾಡಿದ ಎಸ್ಆರ್ ಎಚ್ ಕೋಲ್ಕತ್ತಾದ ಬಿಗು ಬೌಲಿಂಗ್ ದಾಳಿಗೆ ಕುಸಿಯಿತು. ಹೈದರಾಬಾದ್ ತಂಡದ ಆಟಗಾರರು ರನ್ ಗಳಿಸಲು ಪರದಾಡಿದರು. ಟ್ರಾವಿಸ್ ಹೆಡ್ ಅವರು ಶೂನ್ಯಕ್ಕೆ ಔಟಾದರೆ, ರಾಹುಲ್ ತ್ರಿಪಾಟಿ 35 ಬಾಲ್ಗಳಲ್ಲಿ 55 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಪ್ಯಾಟ್ ಕಮೀನ್ಸ್ 30, ಕ್ಲಾಸೆನ್ 32 ರನ್ ಗಳಿಸಿದರು.ಕೋಲ್ಕತ್ತದ ಪರ ಮಿಚೆಲ್ ಸ್ಟಾರ್ಕ್ ಅವರು ಮೂರು ವಿಕೆಟ್ ಕಬಳಿಸಿದರೆ, ರಸೆಲ್ ಎರಡು ವಿಕೆಟ್ ಕಿತ್ತರು.