ಕೊಚ್ಚಿ:ಕೊಚ್ಚಿಯಲ್ಲಿ ಭಾರೀ ಮಳೆ. ಮಂಗಳವಾರ ಸುರಿದ ಮುಂಗಾರುಪೂರ್ವ ಮಳೆಗೆ ಕೊಚ್ಚಿ ನಗರ ಸೇರಿದಂತೆ ಕೇರಳದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಕಳಮಶ್ಯೇರಿಯಲ್ಲಿ ಮೇಘ ಸ್ಪೋಟ ಸಂಭವಿಸಿದೆ. ಇಲ್ಲಿ ಒಂದೂವರೆ ಗಂಟೆಯಲ್ಲಿ 100 ಮಿ.ಮಿ.ಮಳೆಯಾಗಿದೆ.ಕೊಚ್ಚಿ ಕಳಮಶ್ಯೇಯಲ್ಲಿ ಎರಡು ತಾಸು ಸುರಿದ
ಭಾರಿ ಮಳೆಯ ಕಾರಣದಿಂದಾಗಿ ಇದ್ದಕ್ಕಿದ್ದಂತೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಯಿತು. ಒಂದೂವರೆ ತಾಸಿನ ಅವಧಿಯಲ್ಲಿ ಸರಿಸುಮಾರು 100 ಮಿ.ಮೀ. ಮಳೆಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಈ ಪ್ರಮಾಣದ ಮಳೆಗೆ ಮೇಘಸ್ಫೋಟವೇ ಕಾರಣವಿರಬಹುದು ಎಂದಿದ್ದಾರೆ. ಕಳಮಶ್ಶೇರಿ ಪ್ರದೇಶದಲ್ಲಿ ಹಲವು ಮನೆಗಳಿಗೆ ಮಳೆನೀರು ನುಗ್ಗಿದೆ. ಹಲವೆಡೆ ಜಲಾವೃತವಾಗಿದೆ. ರಾಜ್ಯದ ಹಲವೆಡೆ ರಸ್ತೆಗಳ ಮೇಲೆ ನೀರು ಹೊಳೆಯಂತೆ ಹರಿದ ಕಾರಣಕ್ಕೆ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ರಾಜ್ಯದ ಹಲವೆಡೆ ಕೃಷಿ ಬೆಳೆಗಳಿಗೆ ಹಾನಿ ಉಂಟಾಗಿದೆ.
ಕೋಟಯಂ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ನದಿಗಳು ಉಕ್ಕಿ ಹರಿದ ಪರಿಣಾಮವಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕೇಂದ್ರ ಹವಾಮಾನ ಇಲಾಖೆಯು ಕೋಟಯಂ ಹಾಗೂ ಎರ್ನಾಕುಳಂ ಜಿಲ್ಲೆಗಳಿಗೆ ಮಂಗಳವಾರ ರೆಡ್ ಅಲರ್ಟ್ ಘೋಷಿಸಲಾಗಿತ್ತು.







