ಕಾಸರಗೋಡು:ಕೇರಳದಲ್ಲಿ 7 ಜಿಲ್ಲೆಗಳಲ್ಲಿ ಪಂಚಾಯತ್ ಚುನಾವಣೆ ಇಂದು ನಡೆಯುತಿದೆ.ಬೆಳಿಗ್ಗೆ 7 ರಿಂದ ಮತದಾನ ಆರಂಭಗೊಂಡಿದ್ದು ಬಿರುಸಿನ ಮತದಾನ ನಡೆಯುತಿದೆ. ಕಾಸರಗೋಡು ಜಿಲ್ಲೆಯಲ್ಲಿ ಜಿ.ಪಂ.ನ 18, ಮೂರು ನಗರಸಭೆಗಳ 120, 6 ಬ್ಲಾಕ್ ಪಂಚಾಯತ್ಗಳ 92 ಮತ್ತು
38 ಗ್ರಾಮ ಪಂಚಾಯತ್ಗಳ 725 ವಾರ್ಡ್ಗಳಿಗೆ ಡಿ.11ರಂದು ಮತದಾನ ನಡೆಯುತಿದೆ. ಗ್ರಾಮ ಪಂಚಾಯತ್ಗಳಲ್ಲಾಗಿ ಒಟ್ಟು 1242 ಮತಗಟ್ಟೆಗಳು ಹಾಗೂ ನಗರಸಭೆಗಳಲ್ಲಿ 128, ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದೆ.ಜಿಲ್ಲೆಯಲ್ಲಿ ಒಟ್ಟು 11,12,190 ಮತದಾರರಿದ್ದು ಜಿಲ್ಲೆಯಲ್ಲಿ ಒಟ್ಟು 2855 ಮಂದಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಇದರಲ್ಲಿ 1382 ಪುರುಷರು ಹಾಗೂ 1473 ಮಹಿಳೆಯರಾಗಿದ್ದಾರೆ. ಜಿ.ಪಂ.ನಲ್ಲಿ 62 ಅಭ್ಯರ್ಥಿಗಳು, ಬ್ಲಾಕ್ ಪಂಚಾಯತ್ ನಲ್ಲಿ 293 ಅಭ್ಯರ್ಥಿಗಳು, ಗ್ರಾಮ ಪಂಚಾಯತ್ ನಲ್ಲಿ 2167 ಮಂದಿ ಅಭ್ಯರ್ಥಿಗಳು, ನಗರಸಭೆಗಳಿಗೆ 333 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಪಾಲಕ್ಕಾಡ್, ತ್ರಿಶೂರು,ಮಲಪುರಂ, ಕಲ್ಲಿಕೋಟಿ,ವಯನಾಡು, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಡಿ.11ರಂದು ಮತದಾನ ನಡೆಯುತಿದೆ. 7 ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಡಿ.9ರಂದು ಚುನಾವಣೆ ನಡೆದಿತ್ತು
ಗಡಿ ಗ್ರಾಮಗಳಾದ ಕಲ್ಲಪಳ್ಳಿ, ದೇಲಂಪಾಡಿ, ಬಂದಡ್ಕ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಬಿರುಸಿನ ಮತದಾನ ನಡೆಯುತಿದೆ.













