ತಿರುವನಂತಪುರಂ:ಕ್ಯಾಲಿಕಟ್ ಗ್ಲೋಬ್ಸ್ಟಾರ್ಸ್ ಮತ್ತು ಕೊಚ್ಚಿ ಬ್ಲೂ ಟೈಗರ್ಸ್ ನಡುವಿನ ಕೇರಳ ಕ್ರಿಕೆಟ್ ಲೀಗ್ 2025ರ 13ನೇ ಪಂದ್ಯದಲ್ಲಿ ರನ್ಗಳ ಹೊಳೆ ಹರಿಯಿತು.ತಿರುವನಂತಪುರದ ಗ್ರೀನ್ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಬೌಂಡರಿ, ಸಿಕ್ಸರ್ಗಳ ಮಳೆ ಸುರಿಯಿತು. ಇದರಿಂದಾಗಿ ರನ್ಗಳ ಮಳೆಯೂ ಹರಿಯಿತು. ಬೆಟ್ಟದಂತಹ ಗುರಿ ಬೆನ್ನಟ್ಟಿದ
ಸಂಜು ಸ್ಯಾಮ್ಸನ್ನ ಕೊಚ್ಚಿ ಬ್ಲೂ ಟೈಗರ್ಸ್ ಕೊನೆಗೂ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕ್ಯಾಲಿಕಟ್ ಗ್ಲೋಬ್ಸ್ಟಾರ್ಸ್ ತಂಡ 20 ಓವರ್ಗಳಲ್ಲಿ 249 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕೊಚ್ಚಿ ಬ್ಲೂ ಟೈಗರ್ಸ್ 216 ರನ್ ಕಲೆಹಾಕಲಷ್ಟೇ ಶಕ್ತವಾಗಿ 33 ರನ್ಗಳಿಂದ ಸೋಲೊಪ್ಪಿಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗ್ಲೋಬ್ಸ್ಟಾರ್ಸ್ ತಂಡದ ಪರ ಆರಂಭಿಕರಾದ ಸುರೇಶ್ ಸಚಿನ್ ಮತ್ತು ರೋಹನ್ ಕುನ್ನುಮಲ್ ಶತಕದ ಜೊತೆಯಾಟ ನಡೆಸಿದರು. ಈ ವೇಳೆ ಸುರೇಶ್ ಸಚಿನ್ 28 ರನ್ ಗಳಿಸಿದರೆ, ನಾಯಕ ರೋಹನ್ ಕುನ್ನುಮಲ್ ಕೇವಲ 43 ಎಸೆತಗಳಲ್ಲಿ 94 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಈ ಸಮಯದಲ್ಲಿ, ರೋಹನ್ ಕುನ್ನುಮಲ್ 6 ಬೌಂಡರಿ ಮತ್ತು 8 ಸಿಕ್ಸರ್ಗಳನ್ನು ಬಾರಿಸಿದರು. ಇವರ ಬಳಿಕ ಬಂದ ಮರುತುಂಗಲ್ ಅಜಿನ್ನಾಸ್ 49 ರನ್ ಮತ್ತು ಅಖಿಲ್ ಸ್ಕೇರಿಯಾ 45 ರನ್ಗಳ ಕಾಣಿಕೆ ನೀಡಿದರು.
ಇದಕ್ಕೆ ಉತ್ತರವಾಗಿ, ಸಂಜು ಸ್ಯಾಮ್ಸನ್ ಇಲ್ಲದೆಯೇ ಕಣಕ್ಕಿಳಿದಿದ್ದ ಕೊಚ್ಚಿ ತಂಡ ಕೂಡ ಉತ್ತಮ ಆರಂಭವನ್ನು ಪಡೆಯಿತು. ಆದರೆ ಯಾವುದೇ ಬ್ಯಾಟ್ಸ್ಮನ್ಗೂ ದೀರ್ಘ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ತಂಡದ ಪರ ಮುಹಮ್ಮದ್ ಶಾನು ಅತಿ ಹೆಚ್ಚು ಅಂದರೆ 53 ರನ್ ಗಳಿಸಿದರೆ, ವಿನೂಪ್ ಮನೋಹರನ್ 36 ರನ್ಗಳ ಕಾಣಿಕೆ ನೀಡಿದರು. ಇವರ ಜೊತೆಗೆ ರಾಕೇಶ್ ಕೆಜೆ 38 ರನ್, ಮುಹಮ್ಮದ್ ಆಶಿಕ್ 38 ರನ್ ಬಾರಿಸಿದರು. ಆದರೆ ಉಳಿದ ಬ್ಯಾಟ್ಸ್ಮನ್ಗಳಿಗೆ ವಿಶೇಷವಾದದ್ದನ್ನು ಮಾಡಲು ಸಾಧ್ಯವಾಗಲಿಲ್ಲ, ಇದರಿಂದಾಗಿ ಕೊಚ್ಚಿ ಬ್ಲೂ ಟೈಗರ್ಸ್ ತಂಡವು 19 ಓವರ್ಗಳಲ್ಲಿ 216 ರನ್ಗಳಿಗೆ ಆಲೌಟ್ ಆಯಿತು. ಅಂದರೆ, ಈ ಪಂದ್ಯದಲ್ಲಿ, ಎರಡೂ ತಂಡಗಳು ಒಟ್ಟಾಗಿ 37 ಬೌಂಡರಿಗಳು ಮತ್ತು 30 ಸಿಕ್ಸರ್ಗಳನ್ನು ಒಳಗೊಂಡಂತೆ ಒಟ್ಟು 465 ರನ್ ಗಳಿಸಿದವು.












