ಸುಳ್ಯ:ಅರಂತೋಡಿನಲ್ಲಿ ನ. 23 ರಂದು ನಡೆಯಲಿರುವ ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಲೀಲಾ ದಾಮೋದರ್ ಅವರು ಆಯ್ಕೆಯಾಗಿದ್ದಾರೆ. ಕನ್ನಡ ಭವನದಲ್ಲಿ ನಡೆದ
ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರು, ಸಮ್ಮೇಳನ ಸ್ವಾಗತ ಸಮಿತಿ ಮತ್ತು ಸಮ್ಮೇಳನದ ಪೂರ್ವಾಧ್ಯಕ್ಷರ ಸಭೆಯಲ್ಲಿ ಲೀಲಾ ದಾಮೋದರ್ ಅರವರನ್ನು ಆಯ್ಕೆ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು.
ಲೀಲಾ ದಾಮೋದರ್ ಅವರು ನಿವೃತ್ತ ಇತಿಹಾಸ ಪ್ರಾಧ್ಯಾಪಕಿ
ಉತ್ತಮ ಸಾಹಿತಿ. ಕನ್ನಡ ಮತ್ತು ಅರೆಭಾಷೆಯಲ್ಲಿ ಸಾಹಿತ್ಯ ರಚಿಸಿದ್ದಾರೆ.
ಪ್ರಕಟಿತ ಕೃತಿಗಳು: ಹೆಗ್ಗಡೆಯ ಮಗಳು – ಕಥಾ ಸಂಕಲನ, ಗೆಲುವಾಗೆಲೆ ಮನೆ – ಲಲಿತ ಪ್ರಬಂಧಗಳು, ಅದೇ ಭೂಮಿ ಅದೇ ಭಾನು – ಪ್ರವಾಸ ಅನುಭವ, ಮಾತುಬೇಡದ ಕ್ಷಣಗಳು – ಕವನ. ಸಂಕಲನ, ಕಂದನ ಕನಸು – ಮಕ್ಕಳ ಕವಿತೆಗಳು, ಕುರು ಸಾಮ್ರಾಜ್ಞಿ – ಅರೆಭಾಷೆ ಅನುವಾದಿತ ಕೃತಿ, ಗುಬ್ಬಿಗೂಡುನ ಚಿಲಿಪಿಲಿ – ಅರೆಭಾಷೆ ಪ್ರಬಂಧಗಳಸುಳ್ಯದ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷರಾಗಿ ಪ್ರತೀ ತಿಂಗಳು ಸಾಹಿತ್ಯ ಸಂವಾದ ಮಾಲಿಕೆ ಎಂಬ ಕಾರ್ಯಕ್ರಮ ಏರ್ಪಡಿಸಿದ್ದಾರೆ. ತಾಲೂಕಿನ ಸಾಹಿತಿಗಳ ಕೃತಿ ಪರಿಚಯ ಒಂದು ಸಾಹಿತ್ಯ ಪ್ರಿಯರ ಜನಪ್ರಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.