ಸುಳ್ಯ:ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಈ ಬಾರಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅರಂತೋಡಿನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು ಹೇಳಿದ್ದಾರೆ. ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಮತ್ತು ಕಸಾಪ ಸುಳ್ಯ ಹೋಬಳಿ ಆಶ್ರಯದಲ್ಲಿ ಕನ್ನಡ ಭವನದಲ್ಲಿ ನಡೆದ ಮುಂಗಾರು ಕವಿಗೋಷ್ಠಿ-2024 ‘ವರ್ಷ ವೈಭವ’ದ
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾಹಿತಿ ಕುಮಾರಸ್ವಾಮಿ ತೆಕ್ಕುಂಜ ಕಾರ್ಯಕ್ರಮ ಉದ್ಘಾಟಿಸಿದರು. ನೆಹರೂ ಸ್ಮಾರಕ ಮಹಾ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಸಂಜೀವ ಕುದ್ಪಾಜೆ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.
ಕಸಾಪ ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಕಸಾಪ ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ, ಚಂದ್ರಮತಿ.ಕೆ, ಕೋಶಾಧಿಕಾರಿ ದಯಾನಂದ ಆಳ್ವ, ಅಬ್ದುಲ್ಲಾ ಅರಂತೋಡು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕವಿಗೋಷ್ಠಿ ಯಲ್ಲಿ ಕವಿಗಳಾದ ಯೋಗೀಶ್ ಹೊಸೋಳಿಕೆ,ಹೇಮಾವತಿ ಕಜೆಗದ್ದೆ, ಸಾನು ಉಬರಡ್ಕ, ಡಾ ಅನುರಾಧ ಕುರುಂಜಿ,ಉದಯ ಭಾಸ್ಕರ್ ಸುಳ್ಯ, ಲತಾಶ್ರೀ ಸುಪ್ರೀತ್ ಮೋಂಟಡ್ಕ, ಮಮತಾ ರವೀಶ್ ಪಡ್ಡಂಬೈಲು, ಪೂರ್ಣಿಮಾ ಮಡಪ್ಪಾಡಿ, ವಿಜಯಕುಮಾರ್ ಕಾಣಿಚ್ಚಾರ್, ರೇಷ್ಮಾ ಟಿ. ಜೆ, ವಿನೋದ್ ಮೂಡಗದ್ದೆ, ಚಂದ್ರಾವತಿ ಬಡ್ಡಡ್ಕ,ಭವಾನಿ ಕುದ್ಪಾಜೆ ಕವನ ವಾಚಿಸಿದರು. ಗಾಯಕರಾದ ಕೆ. ಆರ್. ಗೋಪಾಲಕೃಷ್ಣ, ಗಿರಿಜಾ ಎಂ.ವಿ,ಸಂಧ್ಯಾ ಮಂಡೆಕೋಲು ಗೀತೆಗಳನ್ನು ಹಾಡಿದರು.