ಸುಳ್ಯ:ಸುಳ್ಯದಿಂದ ಆಲೆಟ್ಟಿ -ಪಾಣತ್ತೂರು- ಕರಿಕೆ – ಚೆತ್ತುಕಯಕ್ಕೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ಆರಂಭಿಸಬೇಕು ಎಂದು ಪುತ್ತೂರು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಾದೇಶಿಕ ಆಯುಕ್ತರಿಗೆ ಕಾಂಗ್ರೆಸ್ ಮುಖಂಡರು ಮನವಿ ಸಲ್ಲಿಸಿದರು. ಸಮರ್ಪಕವಾದ ಸಂಚಾರ ವ್ಯವಸ್ಥೆ
ಇಲ್ಲದೇ ಅಲೆಟ್ಟಿ, ಕಲ್ಲಪಳ್ಳಿ, ಕರಿಕೆ, ಭಾಗದ ಜನತೆಗೆ ಸುಳ್ಯವನ್ನು ಸಂಪರ್ಕಿಸಲು ಅನಾನುಕೂಲವಾಗಿದೆ. ಆದುದರಿಂದ ಈ ಮಾರ್ಗದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ಸು ಪ್ರಾರಂಭಿಸುವಂತೆ ಸುಳ್ಯದ ಕಾಂಗ್ರೆಸ್ ಮುಖಂಡರಾದ ಜಯರಾಮ್ ಭಟ್ ಬೆಟ್ಟ, ಮಾಜಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಗೋಕುಲ್ ದಾಸ್, ಪ್ರಮುಖರಾದ ಭವಾನಿಶಂಕರ್ ಕಲ್ಮಡ್ಕ, ರವಿಕುಮಾರ್ ಕಿರೀಭಾಗ, ಚೇತನ್ ಕಜೆಗದ್ದೆ ಅವರು ಮನವಿ ಸಲ್ಲಿಸಿದರು.