ಅಜ್ಜಾವರ: ಕನ್ನಡ ರಾಜ್ಯೋತ್ಸವ ಪ್ರಯುಕ್ತ ನ.1ರಂದು ಕನ್ನಡದ ಓಟ ಅಜ್ಜಾವರದಲ್ಲಿ ನಡೆಯಲಿದೆ. ಗ್ರಾಮಪಂಚಾಯತ್ ಅಜ್ಜಾವರ, ಸರಕಾರಿ ಪ್ರೌಢಶಾಲೆ ಅಜ್ಜಾವರ,ಯುವಜನ ಸoಯುಕ್ತ ಮಂಡಳಿ ಸುಳ್ಯ,ಪ್ರತಾಪ
ಯುವಕ ಮಂಡಲ ಅಜ್ಜಾವರ, ಚೈತ್ರ ಯುವತಿ ಮಂಡಲ ಅಜ್ಜಾವರ, ಮ್ಯಾರಥಾನ್ ಫ್ರೆಂಡ್ಸ್ ಸುಳ್ಯ,ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಇವುಗಳ ಸoಯುಕ್ತ ಆಶ್ರಯದಲ್ಲಿ ನವಂಬರ್ 1ರಂದು ಪೂ. 9 ಗಂಟೆಗೆ ಅಜ್ಜಾವರ ಗ್ರಾಮಪಂಚಾಯತ್ ಬಳಿಯಿಂದ ಸರಕಾರಿ ಪ್ರೌಢಶಾಲೆ ಅಜ್ಜಾವರದ ತನಕ ‘ಕನ್ನಡದ ಓಟ’ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.









