ಸುಳ್ಯ:ಸುಳ್ಯ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಮೂರು ದಶಕಗಳ ಹಿಂದೆ ಕೈಗಾರಿಕೆಯನ್ನು ಸ್ಥಾಪಿಸಿ ಯಶಸ್ಸಿನ ಮೆಟ್ಟಿಲೇರಿದ ಅಪ್ಪಟ ಗ್ರಾಮೀಣ ಸೊಗಡಿನ ಸುಳ್ಯದ ಸ್ವದೇಶಿ ಸಂಸ್ಥೆ ಸುಳ್ಯ ನಗರದ ಹಳೆಗೇಟಿನ ಕಮಿಲ ಕೆಮಿಕಲ್ಸ್ ಇಂಡಸ್ಟ್ರೀಸ್ . ಸೋಪ್ ನಿರ್ಮಾಣ ಕ್ಷೇತ್ರದಲ್ಲಿ ಉತ್ಕೃಷ್ಟ ಗುಣಮಟ್ಟದ ವೈವಿಧ್ಯಮಯ ಸೋಪ್, ಡಿಟರ್ಜೆಂಟ್, ಲಿಕ್ವಿಡ್ಗಳನ್ನು ವಿವಿಧ ಹೆಸರುಗಳಲ್ಲಿ, ಬ್ರಾಂಡ್ಗಳಲ್ಲಿ ನೀಡಿ ಮನೆ ಮಾತಾಗಿರುವ ಕಮಿಲ ಕೆಮಿಕಲ್ಸ್ ಇಂಡಸ್ಟ್ರೀಸ್ ಹೊರ ತಂದಿರುವ ಸ್ನಾನದ ಸೋಪ್ ‘ಮೈ ಸ್ನಾನ’ ಈಗ ಗಮನ
ಸೆಳೆದಿದೆ. ಮಾರುಕಟ್ಟೆಗೆ ಬಂದ ಕೆಲವೇ ದಿನಗಳಲ್ಲಿ ಮೈ ಸ್ನಾನ ಸೋಪ್ಗೆ ಭಾರೀ ಬೇಡಿಕೆ ಬಂದಿದ್ದು ಮಾರುಕಟ್ಟೆಯಲ್ಲಿ ಟ್ರೆಂಡಿಂಗ್ ಆಗಿದೆ. ಚರ್ಮದ ಆರೋಗ್ಯದ ದೃಷ್ಠಿಯನ್ನಿಟ್ಟು ಮೈ ಸ್ನಾನ ಸೋಪನ್ನು ತಯಾರಿಸಲಾಗಿದೆ. ಮುಖ್ಯವಾಗಿ ಕಡ್ಲೆ ಹುಡಿಯ ಎಸೆನ್ಸ್ ಇರುವ ಸುವಾಸನೆಯುಕ್ತ ‘ಮೈ ಸ್ನಾನ’ ಸೋಪ್ ಚರ್ಮ ಕಾಂತಿಯನ್ನು ಹೆಚ್ಚಿಸುವುದರ ಜೊತೆಗೆ ಚರ್ಮದ ತುರಿಕೆ, ಒಣ ಚರ್ಮ ಸಮಸ್ಯೆಗಳನ್ನು ದೂರ ಮಾಡುತ್ತದೆ ಸುಕೋಮಲ ತ್ವಚೆ ಮತ್ತು ಆಹ್ಲಾದಕರ ಸ್ನಾನವನ್ನು ಕೊಡ ಮಾಡುತ್ತದೆ. ಸುಳ್ಯ ನಗರ ಮತ್ತು ಸಮೀಪದ ಎಲ್ಲಾ ಅಂಗಡಿ, ಮಾಲ್ಗಳಲ್ಲಿ ಸೋಪ್ ಲಭ್ಯವಿದೆ ಎನ್ನುತ್ತಾರೆ ಕಮಿಲ ಕೆಮಿಕಲ್ಸ್ ಇಂಡಸ್ಟ್ರೀಸ್ನ ಮಾಲಕರಾದ ಸುರೇಶ್ಚಂದ್ರ ಕಮಿಲ.
20 ಕ್ಕೂ ಅಧಿಕ ಉತ್ಪನ್ನಗಳು:
1993ರಲ್ಲಿ ಸುಳ್ಯ ಸಮೀಪದ ಕಮಿಲದಲ್ಲಿ ಆರಂಭಗೊಂಡ ಸೋಪ್ ಫ್ಯಾಕ್ಟರಿ ಬಳಿಕ ಸುಳ್ಯ ಹಳೆಗೇಟಿಗೆ ಸ್ಥಳಾಂತರಗೊಂಡು ವ್ಯವಸ್ಥಿತವಾದ ಕಾರ್ಖಾನೆಯಾಗಿ ಮಾರ್ಪಾಡಾಯಿತು.ಬಳಿಕದ ವರ್ಷಗಳಲ್ಲಿ ಸೋಪ್ ನಿರ್ಮಾಣ ಕ್ಷೇತ್ರದಲ್ಲಿ ಹಲವಾರು ವೈವಿಧ್ಯಮಯ ಸೋಪ್ಗಳನ್ನು ಹೊರ ತಂದಿರುವ ಕಮಿಲ ಕೆಮಿಕಲ್ಸ್ ಇಂಡಸ್ಟ್ರೀಸ್ ‘ಡ್ರಗ್ಸ್ ಕಂಟ್ರೋಲ್ ಆಫ್ ಇಂಡಿಯಾ’ದಿಂದ ಮಾನ್ಯತೆ ಪಡೆದ ಪ್ರತಿಷ್ಠಿತ ಸಂಸ್ಥೆಯಾಗಿದೆ.ಆರಂಭದಲ್ಲಿ ಬಟ್ಟೆ ತೊಳೆಯುವ ಕ್ಲೀನ್ ಎಂಬ ಡಿಟರ್ಜೆಂಟ್ ಕೇಕ್ ತಯಾರಿಸುವ ಮೂಲಕ ಸೋಪ್ ನಿರ್ಮಾಣ ಕ್ಷೇತ್ರಕ್ಕಿಳಿದ ಕಮಿಲ ಕೆಮಿಕಲ್ಸ್ ಇಂಡಸ್ಟ್ರೀಸ್ ಈಗ ವಿವಿಧ ಹೆಸರುಗಳಲ್ಲಿ ಮತ್ತು ಬ್ರಾಂಡ್ಗಳಲ್ಲಿ 20 ಕ್ಕೂ ಅಧಿಕ ಉತ್ಪನ್ನಗಳನ್ನು
ಮಾರುಕಟ್ಟೆಗೆ ತರುತಿದೆ. ಕುಶಿ, ಗುರು, ಕ್ಲೀನ್ ಎಂಬ ಬಟ್ಟೆ ತೋಳೆಯುವ ಸೋಪ್ ಹಾಗು ಸೋಪ್ ಹುಡಿ, ಗ್ಯಾಲಕ್ಸಿ ಎಂಬ ಪಾತ್ರೆ ತೊಳೆಯುವ ಸೋಪ್ ಮತ್ತು ಬಾಕ್ಸ್. ಕುಶಿ ಮತ್ತು ಕ್ಲೀನ್ ಎಂಬ ಮಲ್ಟಿ ಪರ್ಪಸ್ ಲಿಕ್ವಿಡ್, ಗುರು ಎಂಬ ಹೆಸರಿನ ಪ್ಲೋರ್ ಕ್ಲೀನರ್, ಟೋಟಲ್ ಲಿಕ್ವಿಡ್ ಎಂಬ ಫ್ರಂಟ್ ಲೋಡ್ ಮತ್ತು ಟಾಫ್ ಲೋಡ್ ವಾಶ್ ಲಿಕ್ವಿಡ್.. ಹೀಗೆ
ಹಲವಾರು ಕಮಿಲ ಕೆಮಿಕಲ್ಸ್ ಪ್ರಾಡಕ್ಸ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಬಟ್ಟೆ ಒಗೆಯಲು, ಪಾತ್ರ ತೊಳೆಯಲು, ನೆಲ ಶುಚಿಗೊಳಿಸಲು, ಕಾರ್ ಇತರ ವಾಹನಗಳನ್ನು ತೊಳೆಯಲು ಹೀಗೆ ಎಲ್ಲಾ ತರಹದ ಕ್ಲೀನಿಂಗ್ಗೆ ಬೇಕಾದ ಸೋಪ್, ಡಿಟರ್ಜೆಂಟ್ಗಳು, ಲಿಕ್ವಿಡ್ಗಳನ್ನು ಕಮಿಲ ಕೆಮಿಕಲ್ಸ್ ಇಂಡಸ್ಟ್ರೀಸ್ ಮಾರುಕಟ್ಟೆಗೆ ಬಿಡುಗಡೆ ಮಾಡುತಿದೆ. ಕರ್ನಾಟಕ ಹಾಗು ಕೇರಳದಾದ್ಯಂತ ಮಾರುಕಟ್ಟೆಯನ್ನು ಹೊಂದಿರುವ ಇವರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯೂ ಇದೆ.