ಸುಳ್ಯ:ಕಲ್ಚರ್ಪೆ ಹೋರಾಟಕ್ಕೆ ರಾಜಕೀಯ ಹೊದಿಕೆ ಹಾಕುವ, ರಾಜಕೀಯ ಬಣ್ಣ ಹಚ್ಚುವ ಪ್ರಯತ್ನ ಬೇಡ. ಇದು ರಾಜಕೀಯ ವಿಷಯ ಅಲ್ಲ. ಇದು ಬದುಕಿನ ಪ್ರಶ್ನೆ ಎಂದು ಕಲ್ಚರ್ಪೆ ಪರಿಸರ ಹೋರಾಟ ಸಮಿತಿ ಹೇಳಿದೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಉಪಾಧ್ಯಕ್ಷ ಅಶೋಕ್ ಪೀಚೆ’ ನಾನು ವಲಸೆ ಬಂದವ ಅಲ್ಲಾ. ನಾನು ಹುಟ್ಟಿದ್ದೇ ಅಲ್ಲಿ.ಎಲ್ಲಾ ದಾಖಲೆಗಳು ಇದೆ. ನಮಗೆ ಹೋರಾಟಕ್ಕೆ
ರಾಜಕೀಯ,ರಾಜಕಾರಣ ಅಗತ್ಯ ಇಲ್ಲ. ಕಲ್ಚರ್ಪೆ ಪರಿಸರ ಹೋರಾಟ ಸಂಘಟನೆಯನ್ನು ವಿಘಟನೆ ಮಾಡುವ ಪ್ರಯತ್ನ ನಡೆಯುತಿದೆ. ಕಲ್ಚರ್ಪೆ ಹೋರಾಟ ನಮ್ಮ ಬದುಕಿನ ಪ್ರಶ್ನೆ ಎಂದು ಹೇಳಿದರು.
ಸಮಿತಿಯ ಗೌರವಾಧ್ಯಕ್ಷ ಕೆ.ಗೋಕುಲ್ದಾಸ್ ಮಾತನಾಡಿ ನಾವು ಹೊರಗಿನಿಂದ ಬಂದವರು ಅಲ್ಲ.ನಾವು ಸೂಜಿ, ನೂಲು ಇದ್ದಂತೆ ಸಮಾಜವನ್ನು ಒಟ್ಟು ಗೂಡಿಸುವುದೇ ನಮ್ಮ ಗುರಿ. ಎಲ್ಲರೂ ಒಟ್ಟಾಗಿ ಕಲ್ಚರ್ಪೆಯ ಸಮಸ್ಯೆಯನ್ನು ಪರಿಹರಿಸಲು ಹೋರಾಟ ಮಾಡಲಾಗುವುದು. ಕಲ್ಚರ್ಪೆಯಲ್ಲಿ ಕಸ ಹಾಕುವುದಕ್ಕೆ ನಗರ ಪಂಚಾಯತ್ ಎಷ್ಟು ಲಕ್ಷ ಖರ್ಚು ಮಾಡಲಾಗಿದೆ ಎಂಬುದನ್ನು ನಗರ ಪಂಚಾಯತ್ ಸಾರ್ವಜನಿಕರಿಗೆ ತಿಳಿಸಬೇಕು ಎಂದರು.
ಹೋರಾಟ ಸಮಿತಿಯ ಅಧ್ಯಕ್ಷ ಸುದೇಶ್ ಅರಂಬೂರು ಮಾತನಾಡಿ ಕಲ್ಚರ್ಲಪೆಯಲ್ಲಿ ಜನರಿಗೆ ಆಗಿರುವ ಎಲ್ಲಾ ಸಮಸ್ಯೆಗಳಿಗೆ ನಗರ ಪಂಚಾಯತ್ ಕಸವನ್ನು ಸರಿಯಾಗಿ ನಿರ್ವಹಣೆ ಮಾಡದೆ ಇರುವುದೆ ಕಾರಣ.ಸದಾ ಹೋರಾಟಕ್ಕೆ ಸಿದ್ಧ ಎಂದರು.
ಸಮಿತಿಯ ಸದಸ್ಯ ಜನಾರ್ಧನ ಚೊಕ್ಕಾಡಿ ‘ನಾವು ವಲಸೆ ಬಂದಿಲ್ಲ. ಕಾನೂನಾತ್ಮಕವಾಗಿ ಸ್ಥಳ ಖರೀದಿ ಮಾಡಿ ಅಲ್ಲಿ ವಾಸ ಮಾಡುತ್ತಿದ್ದೇವೆ. ಈಗ ಅಲ್ಲಿ ವಾಸನೆಯ ಬದಲು ಹೊಗೆ ತುಂಬಿದೆ. ಹೊಗೆ ಹೋಗಲು ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದರು. ವನದುರ್ಗಾ ದೈವಸ್ಥಾನದಲ್ಲಿ ಸತ್ಯ ಪ್ರಮಾಣಕ್ಕೆ ಅವಕಾಶ ಇಲ್ಲ. ಅಲ್ಲಿ ಪ್ರಾರ್ಥನೆ ಮಾಡಬಹುದು ಅಸ್ಟೇ ಎಂದರು.
ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಸಂಚಾಲಕರಾದ ಯೂಸೂಫ್ ಅಂಜಿಕಾರ್, ಕಾರ್ಯದರ್ಶಿ ಬಾಲಚಂದ್ರ ಕಲ್ಚರ್ಪೆ, ಅನಿಲ್ ಸಿ.ಕೆ ಉಪಸ್ಥಿತರಿದ್ದರು.