ಸಂಪಾಜೆ:ಎನ್ ಬಿ ಪಿ ಜಿ ಆರ್ ನವದೆಹಲಿ, ಕೃಷಿ ವಿಜ್ಞಾನ ಕೇಂದ್ರ ದಕ್ಷಿಣ ಕನ್ನಡ, ಸಂಜೀವಿನಿ ಎನ್ ಆರ್ ಎಲ್ ಎಂ ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ಸಂಪಾಜೆ ಶ್ರೀವಿಷ್ಣು ಸಂಜೀವಿನಿ ಒಕ್ಕೂಟ ಸಂಪಾಜೆ ಸಹಯೋಗದಲ್ಲಿ ಗ್ರಾಮದ
ಪರಿಶಿಷ್ಟ ಜಾತಿಯ ರೈತ ಬಾಂಧವರಿಗೆ ಸಂಸಾರ ಸಮೇತ ಜೇನುಪೆಟ್ಟಿಗೆಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು,ಉಪಾಧ್ಯಕ್ಷ ಹನೀಫ್ ಎಸ್ ಕೆ, ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್, ಪಂಚಾಯತ್ ಸದಸ್ಯರಾದ ಸುಂದರಿ ಮುಂಡಡ್ಕ, ವಿಮಲಾ ಪ್ರಸಾದ್, ಕೃಷಿ ಸಖಿ ಮೋಹಿನಿ ವಿಶ್ವನಾಥ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ರಾಜೇಶ್ ಹಾಗೂ ಫಲಾನುಭವಿ ಕೃಷಿಕರು ಉಪಸ್ಥಿತರಿದ್ದರು.












