ಸುಳ್ಯ: ಸುಳ್ಯದ ಕೆ.ವಿ.ಜಿ. ಪಾಲಿಟೆಕ್ನಿಕ್ ಕಾಲೇಜಿನ ಎನ್ಎಸ್ಎಸ್ ಹಿರಿಯ ವಿದ್ಯಾರ್ಥಿಗಳ ಸಂಘ ಎನ್ಎಸ್ಎಸ್ ಸೇವಾ ಸಂಗಮದ ವತಿಯಿಂದ 2024 ಜನವರಿ 6 ರಂದು ರಾಜ್ಯಮಟ್ಟದ ಜನಪದ ರೂಪಕಗಳ ಸ್ಪರ್ಧೆ ‘ಜನಪದ ವೈಭವ- 2024’ ಗುತ್ತಿಗಾರು ವಳಲಂಬೆ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಲಿದೆ ಎಂದು ಎನ್.ಎಸ್.ಎಸ್.ಸೇವಾ ಸಂಗಮ ಟ್ರಸ್ಟ್ನ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೇವಾ ಸಂಗಮ ಟ್ರಸ್ಟ್ನ ಅಧ್ಯಕ್ಷ ರಕ್ಷಿತ್ ಬೊಳ್ಳೂರು ಹಾಗೂ ಸಂಘಟನಾ ಕಾರ್ಯದರ್ಶಿ ಸುಜಿತ್ ಎಂ.ಎಸ್ ಮಾತನಾಡಿ
ಟ್ರಸ್ಟ್ ವತಿಯಿಂದ ಕಳೆದ 8 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು
ಆಯೋಜಿಸುತ್ತಾ ಬರುತ್ತಿದ್ದು ಅದರಲ್ಲಿ ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸವನ್ನು ಡಿಜಿಟಲೀಕರಣಗೊಳಿಸಲು ಸ್ಮಾರ್ಟ್ ಕ್ಲಾಸ್ ಅಳವಡಿಕೆ, ಡಿಜಿಟಲ್ ಲೈಬ್ರರಿ ಅಳವಡಿಕೆಯಂತಹ ಕಾರ್ಯಕ್ರಮಗಳನ್ನು ನಡೆಯುತ್ತಿದೆ. ಅದರೊಂದಿಗೆ ಗಾಂಧಿ ಜಯಂತಿ ಕಾರ್ಯಕ್ರಮಗಳನ್ನು ಆಯೋಜಿಸಿ ಶಾಲೆ ಮತ್ತು ಸಾರ್ವಜನಿಕರಲ್ಲಿ ಸರಕಾರಿ ಶಾಲೆಗಳಲ್ಲಿ ಮಹತ್ವದ ಅರಿವು ಮೂಡಿಸಲು ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಆಟೋಟ ಸ್ಪರ್ಧೆಗಳನ್ನು ನಡೆಸಿಕೊಂಡು ಬರುತ್ತಿದ್ದು ಕಳೆದ ಎರಡು ವರ್ಷಗಳಿಂದ ಆಳಿದು ಹೋಗುತ್ತಿರುವ ಸಂಸ್ಕೃತಿಯ ಉಳಿವಿಗಾಗಿ ಜನಪದ ಉತ್ಸವಗಳನ್ನು ಆಯೋಜಿಸುತ್ತಿದ್ದೇವೆ, ಅದೇ ರೀತಿ ಈ ಬಾರಿ 2024 ಜನವರಿ 06 ರಂದು ವಳಲಂಬೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ರಾಜ್ಯಮಟ್ಟದ ಜನಪದ ವೈಭವ 2024. ಎಂಬ
ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.ಈ ರಾಜ್ಯಮಟ್ಟದ ಜನಪದ ವೈಭವ 2024 ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನವಾಗಿ ರೂ. 30,000/- ನಗದು ಮತ್ತು ಫಲಕ, ದ್ವಿತೀಯ ಬಹುಮಾನವಾಗಿ ರೂ. 20000/- ನಗದು ಮತ್ತು ಫಲಕ ಮತ್ತು ಆಯ್ದ ತಂಡಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು.ಕಲಾ ತಂಡಗಳ ನೋಂದಣಿಗೆ ಡಿಸೆಂಬರ್ 25 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ
9483124940, 8073212908, 9663210561 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಅವರು ವಿನಂತಿಸಿದ್ದಾರೆ. 15 ತಂಡಗಳಿಗೆ ಅವಕಾಶ ನೀಡಲಾಗುವುದು. ಪ್ರತಿ ತಂಡಗಳಿಗೆ ಅರ್ಧ ಗಂಟೆ ಅವಕಾಶ ನೀಡಲಾಗುವುದು. ಜನಪದ ನೃತ್ಯ, ಹಾಡು, ಅಭಿನಯ ಒಳಗೊಂಡ ಜನಪದ ರೂಪಕಗಳನ್ನು ಪ್ರಸ್ತುತಪಡಿಸಬೇಕು ಎಂದು ಅವರು ವಿವರಿಸಿದರು.
ನಾಯಕತ್ವ ತರಬೇತಿ ಶಿಬಿರ:
ಜಾನಪದ ವೈಭವ ಕಾರ್ಯಕ್ರಮದ ಮುನ್ನಾ ದಿನಗಳಾದ ಜನವರಿ 4 ಮತ್ತು 5 ರಂದು ರಾಜ್ಯಮಟ್ಟದ ನಾಯಕತ್ವ ಶಿಬಿರ ನಡೆಯಲಿದೆ. ಎಂದು ಅವರು ತಿಳಿಸಿದ್ದಾರೆ. ಪಾಲಿಟೆಕ್ನಿಕ್ ಹಾಗೂ ಇತರ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಅವಕಾಶ ಇದೆ ಎಂದು ತಿಳಿಸಿದ್ದಾರೆ.
ರಾಜ್ಯಮಟ್ಟದ ಜನಪದ ರೂಪಕಗಳ ಸ್ಪರ್ಧೆಯ ನಿಯಮಗಳು:
ಒಂದಕ್ಕಿಂತ ಹೆಚ್ಚು ಮೂಲ ಜನಪದ ಪ್ರಕಾರಗಳನ್ನು ಪ್ರಸ್ತುತ ಪಡಿಸುವವರಿಗೆ ಆದ್ಯತೆ., ಅವಧಿ 20+10 ನಿಮಿಷ ಒಟ್ಟು 30 ನಿಮಿಷ ಮೀರಬಾರದು. ಕನಿಷ್ಠ 8 ಕಲಾವಿದರು, ಗರಿಷ್ಠ ಮಿತಿಯಿಲ್ಲ, ವಯಸ್ಸಿನ ನಿರ್ಬಂಧವಿಲ್ಲ. ಯುವಕ ಮತ್ತು ಯುವತಿಯರ ತಂಡ ಒಗ್ಗೂಡಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧೆಗೆ ಬೇಕಾದ ಮೇಕಪ್, ಜಾನಪದ ಮೂಲ ವಾದ್ಯ, ಸಂಗೀತ ಪರಿಕರಗಳನ್ನು ತಂಡವೇ ತರಬೇಕು. ಬೆಂಕಿ, ನೀರು, ಸ್ಫೋಟಕ ವಸ್ತುಗಳನ್ನು ವೇದಿಕೆಯಲ್ಲಿ ಬಳಸಲು ಅವಕಾಶವಿಲ್ಲ (ದೀಪವನ್ನು ಹೊರತುಪಡಿಸಿ ) ಒಂದು ತಂಡದ ಕಲಾವಿದರು ಅನ್ನೊಂದು ತಂಡದಲ್ಲಿ ಭಾಗವಹಿಸುವಂತಿಲ್ಲ. ಧ್ವನಿ ಮುದ್ರಿತ ಮೂಲ ಜಾನಪದ ಸಾಹಿತ್ಯ ಹೊಂದಿರುವ ಸಂಗೀತ ಬಳಸಬಹುದು, ಯಾವುದೇ ಭಾಷೆಯ ನಿರ್ಬಂಧ ಇಲ್ಲ.ನೀಡುವ ಪ್ರಸ್ತುತಿ ಯಾವುದೇ ಜಾತಿ, ಧರ್ಮಗಳ ಭಾವನೆಗೆ ಧಕ್ಕೆ ಉಂಟು ಮಾಡುವಂತಿರಬಾರದು.ಎಲ್ಲಾ ತಂಡಗಳಿಗೂ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಮೊದಲು ನೋಂದಾಯಿಸುವ 15 ತಂಡಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ನೋಂದಾಯಿಸಲು ಡಿ.25 ಕೊನೆಯ ದಿನವಾಗಿದೆ. ಜ.6 ರಂದು ಮಧ್ಯಾಹ್ನ 12 ತಂಡದ ಪ್ರತಿನಿಧಿಗಳು ಹಾಜರಿರ ತಕ್ಕದ್ದು ಎಂದು ರಕ್ಷಿತ್ ಬೊಳ್ಳೂರು ಹಾಗೂ ಸುಜಿತ್ ಎಂ.ಎಸ್.ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎನ್ಎಸ್ಎಸ್ ಸೇವಾ ಸಂಗಮ ಟ್ರಸ್ಟ್ನ ಕೋಶಾಧಿಕಾರಿ ಹೇಮನಾಥ್ ಜಯನಗರ, ಸಂಚಾಲಕ ಮಧುಕಿರಣ್, ಸದಸ್ಯರಾದ ಆಕಾಶ್ ಕುದ್ಕುಳಿ, ಅಪೇಕ್ಷ್ ಮಣಿಯಾನ ಉಪಸ್ಥಿತರಿದ್ದರು.