ವಿಶಾಖಪಟ್ಟಣ: ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಚೊಚ್ಚಲ ದ್ವಿಶತಕ ದಾಖಲಿಸಿ ಮಿಂಚಿದ್ದಾರೆ. ಜೈಸ್ವಾಲ್ ಏಕಾಂಗಿ ಹೋರಾಟದ ನೆರವಿನಿಂದ ಮೊದಲು ಬ್ಯಾಟಿಂಗ್ ನಡೆಸುತ್ತಿರುವ ಟೀಮ್ ಇಂಡಿಯಾ, ಎರಡನೇ ದಿನ ಇತ್ತೀಚಿನ

ವರದಿ ಬಂದಾಗ 108 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 387 ರನ್ ಗಳಿಸಿದೆ. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಆಕರ್ಷಕ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ದಾರೆ. 290 ಎಸೆತ ಎದುರಿಸಿದ ಜೈಸ್ವಾಲ್ 19 ಬೌಂಡರಿ, 7 ಭರ್ಜರಿ ಸಿಕ್ಸರ್ ನೆರವಿನಿಂದ 209 ರನ್ ಬಾರಿಸಿ ಔಟ್ ಆಗಿದ್ದಾರೆ. ಭಾರತದ ಪರ ನಾಯಕ ರೋಹಿತ್ ಶರ್ಮ 14, ಶುಭಮನ್ ಗಿಲ್ 34, ಶ್ರೇಯಸ್ ಅಯ್ಯರ್ 27, ರಜತ್ ಪಾಟೀದಾರ್ 32, ಅಕ್ಷರ್ ಪಟೇಲ್ 27, ಶ್ರೀಕರ ಭರತ್ 17, ರವಿಚಂದ್ರನ್ ಅಶ್ವಿನ್ 20 ರನ್ ಗಳಿಸಿ ಔಟಾದರು. ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.









