ಹೈದರಾಬಾದ್: ವಿಕೆಟ್ಕೀಪರ್–ಬ್ಯಾಟರ್ ಇಶಾನ್ ಕಿಶನ್ ಅವರನ್ನು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಹಂಗಾಮಿ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಅಭಿಷೇಕ್ ಶರ್ಮಾ ಉಪನಾಯಕರಾಗಿದ್ದಾರೆ.
ತಂಡದ ನಾಯಕರಾದ
ಪ್ಯಾಟ್ ಕಮಿನ್ಸ್ ಅವರು ಬೆನ್ನು ಗಾಯದಿಂದ ಬಳಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋದ ಆ್ಯಷಸ್ ಟೆಸ್ಟ್ ಸರಣಿಯ ನಂತರ ಅವರು ಯಾವುದೇ ಕ್ರಿಕೆಟ್ ಟೂರ್ನಿಯಲ್ಲಿಯೂ ಆಡಿಲ್ಲ. ಈಚೆಗೆ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿಯೂ ಅವರು ಆಡಿರಲಿಲ್ಲ. ಅದೇ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಪ್ರಶಸ್ತಿ ಜಯಿಸಲು ಮಹತ್ವದ ಕಾಣಿಕೆ ನೀಡಿದ್ದ ಇಶಾನ್ ಅವರು ಈಗ ಹೈದರಾಬಾದ್ ತಂಡವನ್ನು ಮುನ್ನಡೆಸುವರು.
ಈಚೆಗೆ ಅವರ ನಾಯಕತ್ವದಲ್ಲಿ ಜಾರ್ಖಂಡ್ ರಾಜ್ಯ ತಂಡವು ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯನ್ನು ಗೆದ್ದಿತ್ತು.










