ಸುಳ್ಯ:ಸುಳ್ಯದ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ 2023-24ನೇ ಸಾಲಿನ ಕ್ರೀಡೋತ್ಸವ ಕೆವಿಜಿ ಮೈದಾನದಲ್ಲಿ ನಡೆಯಿತು. ಶಾಲೆಯ ವಿದ್ಯಾರ್ಥಿಗಳಾದ ಅಝೀಲ್ , ಇಶಾನ್ ಅಹಮ್ಮದ್ , ಸಾಕ್ಷಿ , ಪ್ರತೀಕ , ಪ್ರತೀಕ್ಷ, ಪುನರ್ವಿ, ಹಾಗೂ ಸನಫ್ ಕ್ರೀಡಾ ಜ್ಯೋತಿಯನ್ನು ಬೆಳಗಿದರು. ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ 4 ತಂಡದ ( ಹಳದಿ, ಕೆಂಪು, ಹಸಿರು ಮತ್ತು ನೀಲಿ) ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ‘ನಾವು ಆರೋಗ್ಯವಂತರಾಗಿರಬೇಕಾದರೆ ಓದಿನ ಜೊತೆಗೆ ದೈಹಿಕ ಶ್ರಮವು
ಅತ್ಯಗತ್ಯ’ ಎಂಬುದಾಗಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಬಳಿಕ ಶಾಲಾ ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಈ ಸಂದರ್ಭದಲ್ಲಿ ಶಾಲಾ ನಿರ್ದೇಶಕಿ ಡಾ. ಜ್ಯೋತಿ ರೇಣುಕಾ ಪ್ರಸಾದ್ ಆಗಮಿಸಿ ಬಹುಮಾನಿತ ವಿದ್ಯಾರ್ಥಿಗಳನ್ನು ಅಭಿನಂದಿ ಸಿದರು.

ಎರಡು ದಿನಗಳ ಕಾಲ ನಡೆದ ಕ್ರೀಡಾಕೂಟದ ಮೊದಲ ದಿನ ಎಲ್ ಕೆ ಜಿಯಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಎರಡನೇ ದಿನ 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಸಿ, ಬಹುಮಾನಗಳನ್ನು ನೀಡಲಾಯಿತು. ಕ್ರೀಡಾ ಸ್ಪರ್ಧೆಯ ಕೊನೆಯ ಹಂತದಲ್ಲಿ ಶಾಲಾ ಬೋಧಕ ಮತ್ತು ಬೋಧಕೇತರ ವರ್ಗದವರು ಕ್ರಿಕೆಟ್ ಆಡುವುದರ ಮೂಲಕ ಮಕ್ಕಳನ್ನು ಮನರಂಜಿಸಿದರು. ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಧನ್ಯವಾದವನ್ನು ಸಲ್ಲಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಹತ್ತನೇ ತರಗತಿಯ ಇಶಾನ್ ಅಹಮ್ಮದ್ ಕ್ರೀಡಾ ಧ್ವಜವನ್ನು ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು . ಕಾರ್ಯಕ್ರಮವು ದೈಹಿಕ ಶಿಕ್ಷಕರಾದ ಭಾಸ್ಕರ್, ತೀರ್ಥವರ್ಣ,ಸುಪ್ರಿಯ ಮತ್ತು ಆಶಾ ಜ್ಯೋತಿ ಇವರ ನಿರ್ದೇಶನದಲ್ಲಿ ನಡೆಯಿತು.












