ಚೆನ್ನೈ:ಸಂಜು ಸ್ಯಾಮ್ಸನ್ ಸಿಡಿಸಿದ ಸ್ಫೋಟಕ ಶತಕದ ನೆರನವಿನಿಂದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 23 ರನ್ಗಳ ಜಯ ದಾಖಲಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ಕೆ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಬೃಹತ್ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು
ಚೆನ್ನೈನ ಉತ್ತಮ ಬೌಲಿಂಗ್ ಹಾಗೂ ಫೀಲ್ಡಿಂಗ್ಗೆ ನಲುಗಿ 20 ಓವರ್ಗಳಲ್ಲಿ 189 ರನ್ ಗಳಿಸಿ ಆಲ್ ಔಟ್ ಆಯಿತು. ಡಿಸಿ ಪರ ಟಿಸ್ಟನ್ ಸ್ಟಬ್(60) ಅರ್ಧ ಶತಕ ಸಿಡಿಸಿದರು.ಪಾತುಂ ನಿಸ್ಸಾಂಕ 41, ಕೆ.ಎಲ್.ರಾಹುಲ್ 18, ಡೇವಿಡ್ ಮಿಲ್ಲರ್ 17, ಅಶುತೋಷ್ ಶರ್ಮ 19 ರನ್ ಗಳಿಸಿದರು.ಚೆನ್ನೈ ಪರ ಜಾಮಿ ಓವರ್ಟನ್ 4,ಅನ್ಸುಲ್ ಕಾಂಬೋಜ್ 3 ವಿಕೆಟ್ ಉರುಳಿಸಿದರು.
ಮೊದಲು ಬ್ಯಾಟ್ ಮಾಡಿದ ಚೆನ್ನೈ ಪರ ಸಂಜು ಸ್ಯಾಮ್ಸನ್ ಅಕರ್ಷಕ ಶತಕ ಸಿಡಿಸಿದರು.ಮೊದಲ ಮೂರು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಸಂಜು ಈ ಪಂದ್ಯದಲ್ಲಿ ಕೇವಲ 56 ಎಸೆತಗಳಲ್ಲಿ 15 ಬೌಂಡರಿ ಹಾಗೂ 4 ಸಿಕ್ಸರ್ಗಳ ನೆರವಿನೊಂದಿಗೆ ಅಜೇಯ 115 ರನ್ ಗಳಿಸಿದರು. ಇದು ಈ ಆವೃತ್ತಿಯಲ್ಲಿ ದಾಖಲಾದ ಮೊದಲ ಶತಕವಾಗಿದೆ.ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಕೇವಲ 36 ಎಸೆತಗಳಲ್ಲಿ 59 ರನ್ ಗಳಿಸಿ ಗಾಯಗೊಂಡು ನಿವೃತ್ತರಾದರು. ಶಿವಂ ದುಬೆ 10 ಎಸೆತಗಳಲ್ಲಿ 20 ರನ್ ಗಳಿಸಿದರು.













