ಸುಳ್ಯ:ಸುಳ್ಯ-ಕಲ್ಲಪಳ್ಳಿ- ಪಾಣತ್ತೂರು-ಕಾಞಂಗಾಡ್ ಅಂತಾರಾಜ್ಯ ಬಸ್ಗೆ ಮಾರ್ಗಸೂಚಿ ಫಲಕ ಹಸ್ತಾಂತರ ಮಾಡಲಾಯಿತು. ಕಾಞಂಗಾಡ್-ಪಾಣತ್ತೂರು- ಸುಳ್ಯ ಅಂತಾರಾಜ್ಯ ಮಾರ್ಗದಲ್ಲಿ ಜುಲೈ 1ರಿಂದ ಮೂರನೇ ಬಸ್ ಸರ್ವೀಸ್ ಆರಂಭಗೊಂಡಿತು. ಇದೀಗ 3 ಬಸ್ಗಳು
ಸರ್ವೀಸ್ ನಡೆಸುತ್ತಿವೆ. 3 ಬಸ್ಗಳಿಗೆ ಕನ್ನಡ ಹಾಗೂ ಇಂಗ್ಲೀಷ್ನಲ್ಲಿ ಬರೆದ ಮಾರ್ಗಸೂಚಿ ಫಲಕಗಳನ್ನು ಹಸ್ತಾಂತರ ಮಾಡಲಾಯಿತು.ಕಲ್ಲಪಳ್ಳಿಯ
ಧನರಾಜ್ ಡಿ.ಡಿ,
ನಿತಿನ್ ಎಂ.ಎಸ್, ಸಂತೋಷ್ ಆಲುಗುಂಜ, ಜ್ಞಾನೇಶ್ ಮೂಲೆಹಿತ್ಲು, ಜಯದೀಪ್ ಪೆರುಮುಂಡ, ಕೇಶವ ಬೊಳ್ಳೂರು, ಶ್ರೇಯಸ್ ಎಂ.ಬಿ ಅವರು ಬಸ್ನ ಚಾಲಕ ಹಾಗೂ ನಿರ್ವಾಹಕರಿಗೆ ಮಾರ್ಗಸೂಚಿ ಫಲಕ ಹಸ್ತಾಂತರ ಮಾಡಿದರು. ಬಳಿಕ ಬಸ್ಗೆ ಮಾರ್ಗಸೂಚಿ ಫಲಕವನ್ನು ಅಳವಡಿಸಲಾಯಿತು.