ಬೆಳ್ಳಾರೆ:ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಆಯೋಜಸಲ್ಪಡುತ್ತಿರುವ ಇನ್ಸ್ಪೈಯರ್ ಅವಾರ್ಡ್ಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇದರ ಪ್ರಾಥಮಿಕ ವಿಭಾಗದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ. 6ನೇ ಆಂಗ್ಲ ಮಾಧ್ಯಮ ವಿಭಾಗದ ಪಿ ಮನ್ವಿ ಹಾಗೂ ಅಹನ್ ಗೌಡ ಕೆ ಎಚ್ ಆಯ್ಕೆಯಾದ ವಿದ್ಯಾರ್ಥಿಗಳು. ವಿಜ್ಙಾನ ವಿಭಾಗದ
ಶಿಕ್ಷಕ ದಿನೇಶ್ ಮಾಚಾರ್ ಇವರ ಮಾರ್ಗದರ್ಶನದಲ್ಲಿ ಈ ವಿದ್ಯಾರ್ಥಿಗಳು ಮಾದರಿಗಳ ಪ್ರಸ್ತಾವನೆಯನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ್ದರು. ಪದವೀಧರೇತರ ಮುಖ್ಯೋಪಾಧ್ಯಾಯರಾದ ಮುಖ್ಯೋಪಾಧ್ಯಾಯ ಮಾಯಿಲಪ್ಪ ಜಿ, ಎಸ್ಡಿಎಂಸಿ ಕಾರ್ಯಾಧ್ಯಕ್ಷರಾದ ಶ್ರೀನಾಥ್ ರೈ ಮತ್ತು ಶಿಕ್ಷಕ ವೃಂದ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ. ಕೆಪಿಎಸ್ ಬೆಳ್ಳಾರೆ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಕಳೆದ 2020-21 ನೇ ಶೈಕ್ಷಣಿಕ ವರ್ಷದಿಂದಲೂ ಸತತವಾಗಿ ಈ ಸ್ಪರ್ಧೆಗೆ ಆಯ್ಕೆಯಾಗುತ್ತಿದ್ದು, ಕಳೆದ 4 ವರ್ಷಗಳಲ್ಲಿ 12 ವಿದ್ಯಾರ್ಥಿಗಳು ಈ ಪಾರಿತೋಷಕಕ್ಕೆ ಭಾಜನರಾಗಿದ್ದಾರೆ.