ರಾಂಚಿ: ರಾಂಚಿಯಲ್ಲಿ ನಡೆಯುತ್ತೊರುವ ನಾಲ್ಕನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆಮಾಡಿಕೊಂಡಿರುವ ಇಂಗ್ಲೆಂಡ್ಗೆ 5 ವಿಕೆಟ್ ನಷ್ಟ ಆಗಿದೆ. ಇಂಗ್ಲೆಂಡ್ 24 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿದೆ. ಭಾರತದ ಪರ ಮೊದಲ ಪಂದ್ಯವನ್ನು
ಆಡುತ್ತಿರುವ ಆಕಾಶ್ ದೀಪ್ 3 ವಿಕೆಟ್ ಉರುಳಿಸಿ ಭರ್ಜರಿ ಆರಂಭವನ್ನು ದೊರಕಿಸಿಕೊಟ್ಟಿದ್ದಾರೆ.ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಈ ಪಂದ್ಯಕ್ಕೆ ಅಲಭ್ಯರಾಗಿದ್ದು ಅವರ ಬದಲಿಗೆ ಆಕಾಶ್ ದೀಪ್ಗೆ ಅವಕಾಶ ನೀಡಲಾಗಿದೆ.ಇಂಗ್ಲೆಂಡ್ ತಂಡದಲ್ಲಿ ಮಾರ್ಕ್ ವುಡ್ ಬದಲಿಗೆ 30 ವರ್ಷದ ವೇಗದ ಬೌಲರ್ ಓಲಿ ರಾಬಿನ್ಸನ್ ತಂಡವನ್ನು ಸೇರಿಕೊಂಡಿದ್ದಾರೆ. ರೆಹಾನ್ ಆಹ್ಮದ್ ಬದಲು ಆಫ್ ಸ್ಪಿನ್ನರ್, 20 ವರ್ಷದ ಶೋಯೆಬ್ ಬಷೀರ್ ಅವರಿಗೆ ಅವಕಾಶ ನೀಡಿದೆ.ಭಾರತ ಐದು ಟೆಸ್ಟ್ಗಳ ಸರಣಿಯಲ್ಲಿ ಈಗ 2–1 ಮುನ್ನಡೆ ಸಾಧಿಸಿದೆ.