ಚೆನ್ನೈ:ಇಲ್ಲಿ ನಡೆದ ದಕ್ಷಿಣಾ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಮಹಿಳೆಯರ ತಂಡವು 10 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.ಮೊದಲ ಇನಿಂಗ್ಸ್ನಲ್ಲಿ ಶೆಫಾಲಿ ವರ್ಮಾ ಅವರ ವೇಗದ ದ್ವಿಶತಕ ಹಾಗೂ ಲಿ ಸ್ನೇಹ ರಾಣ ಅವರ ಮಾರಕ ದಾಳಿ (77 ರನ್ಗಳಿಗೆ 8 ವಿಕೆಟ್) ಈ ಪಂದ್ಯದ ಪ್ರಮುಖಾಂಶಗಳು.
ಮೊದಲ ಇನಿಂಗ್ಸ್ನಲ್ಲಿ
ಶೆಫಾಲಿ 197 ಎಸೆತಗಳಲ್ಲಿ 205 ರನ್ ಗಳಿಸಿದರೆ, ಸ್ಮೃತಿ ಮಂಧಾನ 149 ರನ್ ಬಾರಿಸಿದರು. 6 ವಿಕೆಟ್ ನಷ್ಟಕ್ಕೆ 603 ರನ್ ಗಳಿಸಿದ್ದಾಗ ಭಾರತ ತಂಡ ಡಿಕ್ಲೇರ್ ಮಾಡಿತು. ಭಾರತೀಯ ಬೌಲರ್ಗಳು ದಕ್ಷಿಣ ಆಫ್ರಿಕಾವನ್ನು 266 ರನ್ಗಳಿಗೆ ಕಟ್ಟಿಹಾಕಿದರು.337ರನ್ ಹಿನ್ನಡೆಯಲ್ಲಿದ್ದ ದಕ್ಷಿಣ ಆಫ್ರಿಕಾಗೆ ಭಾರತ ಫಾಲೋಆನ್ ಹೇರಿತು.
ಎರಡನೇ ಇನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾ ಪರ ನಾಯಕಿ ಲೌರಾ ವೊಲ್ವಾರ್ಡ್ಟ್ (122), ಸುನ್ ಲುಸ್ (109) ಅವರ ಶತಕ ಹಾಗೂ ನದೀನ್ ಡಿ ಕ್ಲಾರ್ಕ್ (61) ಅವರ ಅರ್ಧಶತಕದ ನೆರವಿನಿಂದ 373 ರನ್ ಗಳಿಸಿ, 37 ರನ್ಗಳ ಗುರಿ ನೀಡಿತು.ಇದನ್ನು ಭಾರತ ತಂಡವು 9.2 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಬೆನ್ನತ್ತಿತು.
ಸ್ಕೋರ್:
ಭಾರತ: 603/6 ಡಿಕ್ಲೇರ್ ಹಾಗೂ 37/0
ದಕ್ಷಿಣ ಆಫ್ರಿಕಾ: 266 ಹಾಗೂ 373