ಅಡಿಲೇಡ್: ಭಾರತ ಮಹಿಳಾ ತಂಡವು ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಬಾರಿ ಟಿ20 ಕ್ರಿಕೆಟ್ ಸರಣಿ ಗೆದ್ದು ಇತಿಹಾಸ ರಚಿಸಿತು.
ಶನಿವಾರ ನಡೆದ ಪಂದ್ಯದಲ್ಲಿ ಭಾರತ ತಂಡವು 17 ರನ್ಗಳಿಂದ ಜಯಿಸಿತು. ಮೂರು ಪಂದ್ಯಗಳ ಸರಣಿಯನ್ನು
2–1ರಿಂದ ಜಯಿಸಿತು. ಸ್ಮೃತಿ (82; 55ಎ, 4X8, 6X3) ಮತ್ತು ಜಿಮಿಮಾ (59;46ಎ, 4X4) ಅವರ 121 ರನ್ಗಳ ಜೊತೆಯಾಟದ ಬಲದಿಂದ ತಂಡವು 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 176 ರನ್ ಗಳಿಸಿತು.
ಇದಕ್ಕುತ್ತರವಾಗಿ ಆಸ್ಟ್ರೇಲಿಯಾ ತಂಡವು ನಿಗದಿಯ ಓವರ್ಗಳಲ್ಲಿ 9 ವಿಕೆಟ್ಗಳಿಗೆ 159 ರನ್ ಗಳಿಸಿ ಸೋತಿತು. ಕರ್ನಾಟಕದ ಶ್ರೇಯಾಂಕಾ ಪಾಟೀಲ (22ಕ್ಕೆ3) ಮತ್ತು ಸ್ಪಿನ್ನರ್ ಶ್ರೀಚರಣಿ (35ಕ್ಕೆ2) ಅವರು ಮಿಂಚಿದರು.
ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್ಗಳಲ್ಲಿ 6ಕ್ಕೆ176 (ಸ್ಮೃತಿ ಮಂದಾನ 82, ಜಿಮಿಮಾ ರಾಡ್ರಿಗಸ್ 59, ರಿಚಾ ಘೋಷ್ 18, ಅನಾಬೆಲ್ ಸದರ್ಲೆಂಡ್ 34ಕ್ಕೆ2) ಆಸ್ಟ್ರೇಲಿಯಾ: 20 ಓವರ್ಗಳಲ್ಲಿ 9ಕ್ಕೆ159 (ಫೋಬಿ ಲಿಚ್ಫೀಲ್ಡ್ 26, ಆ್ಯಷ್ಲೆ ಗಾರ್ಡನರ್ 57, ಜಾರ್ಜಿಯಾ ವೆರ್ಹಾಮ್ 12, ಅನಾಬೆಲ್ ಸದರ್ಲೆಂಡ್ 14, ಶ್ರೇಯಾಂಕಾ ಪಾಟೀಲ 22ಕ್ಕೆ3, ಅರುಂಧತಿ ರೆಡ್ಡಿ 35ಕ್ಕೆ2, ಶ್ರೀಚರಣಿ 32ಕ್ಕೆ3)






