ಪಾರ್ಲ್, ದಕ್ಷಿಣ ಆಫ್ರಿಕಾ: ಸಂಜು ಸ್ಯಾಮ್ಸನ್ ಶತಕ ಮತ್ತು ಅರ್ಷದೀಪ್ ಸಿಂಗ್ ಅವರ ಅಮೋಘ ಬೌಲಿಂಗ್ ಬಲದಿಂದ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ 78 ರನ್ಗಳಿಂದ ಜಯಿಸಿತು.ಈ ಮೂಲಕ ಕೆ.ಎಲ್. ರಾಹುಲ್ ಬಳಗವು 2–1ರಿಂದ ಸರಣಿ ಗೆದ್ದುಕೊಂಡಿತು.ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ
ಮಾಡಿಕೊಂಡಿತು. ಸಂಜು ಸ್ಯಾಮ್ಸನ್ ಶತಕ (108) ಮತ್ತು ತಿಲಕ್ ವರ್ಮಾ (52) ಜೊತೆಯಾಟದ ಬಲದಿಂದ ಭಾರತ ತಂಡವು 50 ಓವರ್ಗಳಲ್ಲಿ 8 ವಿಕೆಟ್ಗಳಿಗೆ 296 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಆತಿಥೇಯ ತಂಡಕ್ಕೆ 45.5 ಓವರ್ಗಳಲ್ಲಿ 218 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಎಡಗೈ ವೇಗಿ ಅರ್ಷದೀಪ್ ಸಿಂಗ್ (30ಕ್ಕೆ4) ಆವೇಶ್ ಖಾನ್ (45ಕ್ಕೆ2) ಮತ್ತು ವಾಷಿಂಗ್ಟನ್ ಸುಂದರ್ (38ಕ್ಕೆ2) ಉತ್ತಮ ದಾಳಿ ಸಂಘಟಿಸಿದರು. ಆತಿಥೇಯ ತಂಡದ ಪರ ಟೋನಿ ಡಿ ಝಾರ್ಜಿ (81) ಉತ್ತಮ ಹೋರಾಟ ನಡೆಸಿದರು.












