ಕೋಲ್ಕತಾ: ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನ.14ರಿಂದ ಆರಂಭವಾಗುವ ಮೊದಲ ಟೆಸ್ಟ್ನಲ್ಲಿ ಭಾರತ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.ಆರು ವರ್ಷಗಳ ಬಳಿಕ ಟೆಸ್ಟ್ ಈಡನ್ ಗಾರ್ಡನ್ಸ್ನಲ್ಲಿ ಟೆಸ್ಟ್ ಪಂದ್ಯ ನಡೆಯುತಿದೆ. ಇಂಗ್ಲೆಂಡ್ ವಿರುದ್ಧ 2-2ರಿಂದ ಡ್ರಾ ಹಾಗೂ ವೆಸ್ಟ್ಇಂಡೀಸ್ ವಿರುದ್ಧ 2-0 ಅಂತರದಿಂದ ಗೆದ್ದಿರುವ ಭಾರತ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ
3ನೇ ಸ್ಥಾನದಲ್ಲಿದೆ. 2ನೇ ಟೆಸ್ಟ್ ಪಂದ್ಯವು ನ.22ರಿಂದ ಗುವಾಹಟಿಯಲ್ಲಿ ಆರಂಭವಾಗಲಿದೆ. ಅಲ್ಲದೆ 3 ಏಕದಿನ ಹಾಗೂ 5 ಟಿ-20 ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ಆಡಲಿದೆ. ಏಕದಿನ ಪಂದ್ಯಗಲು ನ.30, ಡಿ.3 ಹಾಗೂ ಡಿ.6ರಂದು ನಡೆಯಲಿದೆ. ಟ್ವೆಂಟಿ-20 ಸರಣಿಯು ಡಿ.9ರಿಂದ 19ರ ತನಕ ಕಟಕ್, ಮುಲ್ಲನ್ಪುರ, ಧರ್ಮಶಾಲಾ, ಲಕ್ನೊ ಹಾಗೂ ಅಹ್ಮದಾಬಾದ್ನಲ್ಲಿ ನಡೆಯಲಿದೆ.
ಶುಭಮನ್ ಗಿಲ್ ನಾಯಕತ್ವ, ರಿಷಭ್ ಪಂತ್ ಉಪ ನಾಯಕತ್ವದ ಭಾರತ ತಂಡವು ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ವಿನ್ನರ್ ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದೆ.
ಈಡನ್ ಗಾರ್ಡನ್ಸ್ ಪಿಚ್ನಲ್ಲಿ ಸಮಬಲದ ಸ್ಪರ್ಧೆ ನಡೆಯುವ ನಿರೀಕ್ಷೆ ಇದೆ.
ನಂ.1 ಟೆಸ್ಟ್ ವಿಕೆಟ್ಕೀಪರ್ ರಿಷಭ್ ಪಂತ್ ಇದೀಗ ಫಿಟ್ ಆಗಿದ್ದು, ಭಾರತವು ಧ್ರುವ ಜುರೆಲ್ರನ್ನು ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಆಡುವ 11ರ ಬಳಗದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಬಹುದು.
ರಾವಲ್ಪಿಂಡಿಯಲ್ಲಿ ಪಾಕಿಸ್ತಾನದ ವಿರುದ್ಧ ಗೆದ್ದಿರುವ ಟೆಸ್ಟ್ ತಂಡವನ್ನೇ ದಕ್ಷಿಣ ಆಫ್ರಿಕಾ ಕಣಕ್ಕಿಳಿಸಬಹುದು. ಮಾರ್ಕೊ ಜಾನ್ಸನ್ ಅವರು ವಿಯಾನ್ ಮುಲ್ದರ್ ಬದಲಿಗೆ ಆಡುವ 11ರ ಬಳಗ ಸೇರಬಹುದು. ನಾಯಕ ಟೆಂಬಾ ಬವುಮಾ ವಾಪಸಾಗಿದ್ದಾರೆ.
ತಂಡಗಳು:
ಭಾರತ: ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್(ನಾಯಕ), ರಿಷಭ್ ಪಂತ್(ವಿಕೆಟ್ಕೀಪರ್),ಧ್ರುವ ಜುರೆಲ್, ರವೀಂದ್ರ ಜಡೇಜ, ವಾಶಿಂಗ್ಟನ್ ಸುಂದರ್, ಮುಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಜಸ್ಪ್ರಿತ್ ಬುಮ್ರಾ.
ದಕ್ಷಿಣ ಆಫ್ರಿಕಾ: ಏಡೆನ್ ಮರ್ಕ್ರಮ್, ರಯಾನ್ ರಿಕೆಲ್ಟನ್, ಟ್ರಿಸ್ಟನ್ ಸ್ಟಬ್ಸ್, ಟೋನಿ ಡಿ ರೆರ್ಝಿ, ಟೆಂಬಾ ಬವುಮಾ(ನಾಯಕ), ಕೈಲ್ ವೆರ್ರೆನ್ನೆ(ವಿಕೆಟ್ಕೀಪರ್), ಮಾರ್ಕೊ ಜಾನ್ಸನ್, ಸೈಮನ್ ಹಾರ್ಮರ್, ಕೇಶವ ಮಹಾರಾಜ, ಎಸ್.ಮುತ್ತುಸ್ವಾಮಿ, ಕಾಗಿಸೊ ರಬಾಡ.












