ರಾಯ್ಪುರ:ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಾಲ್ಕನೇ ಟಿ20 ಪಂದ್ಯ ಇಂದು ನಡೆಯಲಿದೆ.ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ ಈಗಾಗಲೇ 2-1 ಅಂತರದಿಂದ ಮುನ್ನಡೆ ಪಡೆಕೊಂಡಿದ್ದು, ಇಂದಿನ ಪಂದ್ಯ ಗೆದ್ದರೆ ಸರಣಿ
ವಶಪಡಿಸಿಕೊಳ್ಳಲಿದೆ. ಕಾಂಗರೂ ಪಡೆಗೆ ಉಳಿದ ಎರಡೂ ಪಂದ್ಯ ಗೆಲ್ಲಲೇ ಬೇಕಿದೆ. ಕಳೆದ ಪಂದ್ಯದಲ್ಲಿ ಭಾರತ 222ರನ್ ಕಲೆಹಾಕಿದರೂ ಸೋಲುಂಡಿತ್ತು.
ಉಪನಾಯಕ ಶ್ರೇಯಸ್ ಅಯ್ಯರ್ ಆಗಮನದಿಂದ ಟೀಂ ಇಂಡಿಯಾ ಬ್ಯಾಟಿಂಗ್ ಬಲ ಹೆಚ್ಚಿದೆ. ಹೀಗಾಗಿ ತಿಲಕ್ ವರ್ಮ ತನ್ನ ಸ್ಥಾನವನ್ನು ಹಿರಿಯ ಬ್ಯಾಟರ್ಗೆ ಬಿಟ್ಟುಕೊಡಬೇಕಾಗಬಹುದು. ಪ್ರಸಿದ್ಧ್ ಕೃಷ್ಣ ಬದಲು ದೀಪಕ್ ಚಹಾರ್ ಆಯ್ಕೆಯಾಗಬಹುದು.
ಕಳೆದ ಪಂದ್ಯದಲ್ಲಿ 200ಕ್ಕೂ ಅಧಿಕ ರನ್ ಗಳಿಸಿದರೂ ಗ್ಲೆನ್ ಮ್ಯಾಕ್ಸ್ವೆಲ್ ಸ್ಫೋಟಕ ಆಟದಿಂದ ಸೋಲು ಕಂಡಿತು. ಈ ಸೋಲಿನ ನಂತರ ಬೌಲಿಂಗ್ನಲ್ಲಿ ಬದಲಾವಣೆ ಮಾಡುವುದು ಬಹುತೇಕ ಖಚಿತ.