ಅಹಮದಾಬಾದ್: ಭಾರತ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇಂದು ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು ಮಣಿಸಿ ಸತತ ಎರಡು ಬಾರಿ ಚಾಂಪಿಯನ್ ಆದ ಭಾರತ ಒಟ್ಟಾರೆ ಮೂರನೇ ಬಾರಿ ಕಪ್ ಎತ್ತಿದೆ. ಅಹಮ್ಮದಾಬಾದ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್ಗಳಲ್ಲಿ
5 ವಿಕೆಟ್ ನಷ್ಟಕ್ಕೆ 255 ರನ್ ಗಳಿಸಿತು.ಬೃಹತ್ ಗುರಿ ಬೆನ್ನಟ್ಟಿದ ನ್ಯೂಝಿಲೆಂಡ್ ಭಾರತೀಯ ಬೌಲರ್ಗಳ ಬಿಗು ದಾಳಿಗೆ ನಲುಗಿ 19 ಓವರ್ಗಳಲ್ಲಿ 159 ರನ್ಗೆ ಆಲ್ ಔಟ್ ಆಯಿತು. 96 ರನ್ಗಳ ಬೃಹತ್ ಅಂತರದ ಗೆಲುವು ದಾಖಲಿಸಿದ ಭಾರತ ಸಂಭ್ರಮಿಸಿತು. ಅತ್ಯುತ್ತಮ ಬ್ಯಾಟಿಂಗ್, ಬೌಲಿಂಗ್ ಹಾಗೂ ಅದ್ಭುತ ಫೀಲ್ಡಿಂಗ್ನ ಸಂಘಟಿತ ಹೋರಾಟದ ಫಲವಾಗಿ ಭಾರತ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತ ಅರ್ಹವಾಗಿಯೇ ಕಪ್ ಎತ್ತಿತು. ಬೆಟ್ಟದಂತಹಾ ಗುರಿ ಬೆನ್ನಟ್ಟಿದ ನ್ಯೂಝಿಲೆಂಡ್ ಯಾವ ಹಂತದಲ್ಲಿಯೂ ಹೋರಾಟ ನಡೆಸಿಲ್ಲ. ಬಿಗು ದಾಳಿ ಸಂಘಟಿಸಿದ ಭಾರತದ

ಬೌಲರ್ಗಳು ನಿರಂತರ ವಿಕೆಟ್ ಉರುಳಿಸಿ ಒತ್ತಡ ಹೇರಿದರು. 72 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ವಿಕೆಟ್ ಕೀಪರ್ ಬ್ಯಾಟರ್ ಟಿಂ ಸೆಯ್ಫರ್ಟ್ ಅರ್ಧ ಶತಕ(52) ಶತಕ ಸಿಡಿಸಿದರು. ನಾಯಕ ಮಿಚೆಲ್ ಸ್ಯಾನ್ಟರ್(43) ರನ್ ಬಾರಿಸಿದರು. ಭಾರತದ ಪರ ಜಸ್ಪ್ರೀತ್ ಬುಮ್ರಾ(13/4),ಅಕ್ಷರ್ ಪಟೇಲ್(24/3), ಹಾರ್ದಿಕ್ ಪಾಂಡ್ಯ(36/1) ವರುಣ್ ಚಕ್ರವರ್ತಿ(39/1) ಅಭಿಷೇಕ್ ಶರ್ಮ(5/1) ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಪರವಾಗಿ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮ, ಇಶಾನ್ ಕಿಶನ್ ಅಬ್ಬರಿಸಿದರು. ಆರಂಭಿಕ ಬ್ಯಾಟರ್ಗಳಾದ ಸಂಜು ಸ್ಯಾಮ್ಸನ್ (89 ರನ್, 45ಎಸೆತ 5 ಬೌಂಡರಿ, 8 ಸಿಕ್ಸರ್ ) ಹಾಗೂ ಅಭಿಷೇಕ್ ಶರ್ಮಾ (52 ರನ್, 22ಎಸೆತ 6 ಬೌಂಡರಿ, 3 ಸಿಕ್ಸರ್ ) ಸ್ಫೋಟಕ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್ಗೆ 7.1 ಓವರ್ಗಳಲ್ಲಿ 98 ರನ್ ಕಲೆಹಾಕಿತು. ನಂತರ ಬಂದ ಇಶಾನ್ ಕಿಶನ್ (54 ರನ್, 25ಎಸೆತ 4 ಬೌಂಡರಿ, 4 ಸಿಕ್ಸರ್ ) ಕೂಡ ಅಬ್ಬರಿಸಿದರು.

ಸಂಜು ಮತ್ತು ಅಂತಿಮವಾಗಿ ಇಶನ್ ಶತಕದ ಜೊತೆಯಾಟ ನೀಡಿ ಭದ್ರ ಅಡಿಪಾಯ ಹಾಕಿದರು.ಶಿವಂ ದುಬೆ (26 ರನ್, 8ಎಸೆತ,3 ಬೌಂಡರಿ, 2 ಸಿಕ್ಸರ್ ) ಮೂಲಕ ಅಬ್ಬರಿಸಿದರು. ಈ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಭಾರತ ತಂಡವು ಬೃಹತ್ ಗುರಿ ನೀಡಿದೆ. ಹಾರ್ದಿಕ್ ಪಾಂಡ್ಯ(18), ಸೂರ್ಯಕುಮಾರ್ ಯಾದವ್(0), ತಿಲಕ್ ವರ್ಮ(8) ರನ್ ಗಳಿಸಿದರು.
ಬೌಂಡರಿ, ಸಿಕ್ಸರ್ಗಳ ಸುರಿಮಳೆಗೈದ ಭಾರತದ ಬ್ಯಾಟರ್ಗಳು 18 ಬೌಂಡರಿ ಹಾಗೂ 19 ಸಿಕ್ಸರ್ ಸಿಡಿಸಿದರು. ಸಂಜು ಸ್ಯಾಮ್ಸನ್ ಸತತ ಮೂರನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಆಸರೆಯಾದರು. ಅಭಿಷೇಕ್ ಶರ್ಮ, ಇಶಾನ್ಕಿಶನ್ ಆಕರ್ಷಕ ಅರ್ಧ ಶತಕ ಸಿಡಿಸುವ ಮೂಲಕ ಭದ್ರ ಅಡಿಪಾಯ ಹಾಕಿದರು.









