ನ್ಯೂಯಾರ್ಕ್: ಟಿ20ವಿಶ್ವಕಪ್ ಪಂದ್ಯಾಕೂಟಕ್ಕೆ ಭರ್ಜರಿ ಸಿದ್ಧತೆ ಮಾಡಿರುವ ಭಾರತ ಬಾಂಗ್ಲಾದೇಶದ ಎದುರು ನಡೆದ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿತು. ಬಾಂಗ್ಲಾ ತಂಡವನ್ನು 60 ರನ್ ಅಂತರದಲ್ಲಿ ಮಣಿಸಿದ ಟೀಂ ಇಂಡಿಯಾ ತನ್ನ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ
5 ವಿಕೆಟ್ ನಷ್ಟಕ್ಕೆ 182 ರನ್ ಭಾರಿಸಿತು. ಬಾಂಗ್ಲಾ ತಂಡ 20 ಓವರ್ಗಳಲ್ಲಿ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಬಾಂಗ್ಲಾ ಪರ ಮಹ್ಮದುಲ್ಲಾ 40 ರನ್ ಬಾರಿಸಿದರು. ಭಾರತದ ಪರ ಅರ್ಷದೀಪ್ ಸಿಂಗ್, ಶಿವಂ ದುಬೆ ತಲಾ 2 ವಿಕೆಟ್ ಕಿತ್ತರು.
ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.ರಿಷಭ್ ಪಂತ್ ಅರ್ಧಶತಕ ಹಾಗೂ ಹಾರ್ದಿಕ್ ಪಾಂಡ್ಯ ಮಿಂಚಿನ ಬ್ಯಾಟಿಂಗ್ ಬಲದಿಂದ ಭಾರತ ತಂಡವು ಉತ್ತಮ ಮೊತ್ತ ಪೇರಿಸಿತು.
ರಿಷಭ್ (53; 32ಎ, 4X4, 6X4) ಹಾಗೂ ಪಾಂಡ್ಯ (ಔಟಾಗದೆ 40; 23ಎ, 4X2, 6X4) ಅವರ ಮಿಂಚಿನ ಬ್ಯಾಟಿಂಗ್ನಿಂದ ತಂಡವು 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 182 ರನ್ ಗಳಿಸಿತು. ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. ಎರಡನೇ ಓವರ್ನಲ್ಲಿಯೇ ಸಂಜು ಸ್ಯಾಮ್ಸನ್ (1 ರನ್) ಅವರನ್ನು ಶರಿಫುಲ್ ಇಸ್ಲಾಂ ಬೀಸಿದ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಈ ಹಂತದಲ್ಲಿ ರೋಹಿತ್ (23; 19ಎ) ಜೊತೆಗೂಡಿದ ಪಂತ್ ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ 48 ರನ್ ಸೇರಿಸಿದರು.ಏಳನೇ ಓವರ್ನಲ್ಲಿ ರೋಹಿತ್ ಔಟಾದರು. ಕ್ರೀಸ್ಗೆ ಬಂದ ಸೂರ್ಯಕುಮಾರ್ ಯಾದವ್ (31; 18ಎ) ಅವರು ಕಾಣಿಕೆ ನೀಡಿದರು. ಶಿವಂ ದುಬೆ (14; 16ಎ) ಒಂದು ಸಿಕ್ಸರ್ ಹೊಡೆದರು. ಆದರೆ ಆವರ ಆಟದಲ್ಲಿ ವೇಗ ಇರಲಿಲ್ಲ. ಹಾರ್ದಿಕ್ ಮಾತ್ರ ನಾಲ್ಕು ಸಿಕ್ಸರ್ ಸಿಡಿಸಿ ಮಿಂಚಿದರು.