ಬಾರ್ಬಡೋಸ್:ಟಿ 20 ವಿಶ್ವಕಪ್ ಸೂಪರ್ 8 ಹಂತದ ಮೊದಲ ಪಂದ್ಯದಲ್ಲಿ ಭಾರತ ತಂಡ ಅಫ್ಗಾನಿಸ್ತಾನವನ್ನು 47 ರನ್ ಅಂತರದಲ್ಲಿ ಮಣಿಸಿ ಶುಭಾರಂಭ ಮಾಡಿತು.ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು.ಗುರಿ ಬೆನ್ನಟ್ಟಿದ ಅಪಘಾನಿಸ್ತಾನ 20 ಓವರ್ಗಳಲ್ಲಿ 134 ರನ್ ಗಳಿಸಿ ಆಲ್ ಔಟ್ ಆಗಿ 47 ರನ್ ಅಂತರದಲ್ಲಿ ಸೋಲೊಪ್ಪಿಕೊಂಡಿತು. ಅಫಘಾನಿಸ್ತಾನಕ್ಕೆ ಜಸ್ಪ್ರೀತ್ ಬುಮ್ರಾ ಆರಂಭದಲ್ಲಿಯೇ
ಆಘಾತ ನೀಡಿದರು. ಬಿಗು ದಾಳಿ ಸಂಘಟಿಸಿದ ಬುಮ್ರಾ 3 ವಿಕೆಟ್ ಉರುಳಿಸಿ ಮತ್ತೊಮ್ಮೆ ಭಾರತದ ಜಯದ ರುವಾರಿಯಾದರು. ಬುಮ್ರಾ 4 ಓವರ್ಗಳಲ್ಲಿ ಕೇವಲ 7 ರನ್ ನೀಡಿ ಅಪಘಾನಿಸ್ತಾನದ ಪ್ರಮುಖ ಮೂರು ವಿಕೆಟ್ಗಳನ್ನು ಉರುಳಿಸಿದರು. 24 ಎಸೆಗಳಲ್ಲಿ 20 ಡಾಟ್ ಬಾಲ್ ಎಸೆದ ಬುಮ್ರಾ ಬಿಗು ದಾಳಿ ನಡೆಸಿದರು. ಕರಾರುವಕ್ಕಾಗಿ ಬೌಲಿಂಗ್ ನಡೆಸಿದ ಭಾರತೀಯ ಬೌಲರ್ಗಳು ನಿರಂತರ ಅಪಘಾನಿಸ್ತಾನದ ವಿಕೆಟ್ ಉರುಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಅಪ್ಗಾನ್ ಬ್ಯಾಟರ್ಗಳು ಭಾರತೀಯ ಬೌಲರ್ಗಳ ಬಿಗಿ ದಾಳಿ ಮುಂದೆ ರನ್ ಗಳಿಸಲು ಪರದಾಡಿದರು.
26 ರನ್ ಗಳಿಸಿದ ಒಮರ್ಸಾಯ್ ಅಪಘಾನಿಸ್ತಾನದ ಟಾಪ್ ಸ್ಕೋರರ್ ಆದರು. ಅರ್ಷದೀಪ್ ಸಿಂಗ್ 3, ಕುಲ್ದೀಪ್ ಯಾದವ್ 2 ವಿಕೆಟ್ ಉರುಳಿಸಿದರೆ ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜ ತಲಾ 1 ವಿಕೆಟ್ ಪಡೆದರು.
ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ಸೂರ್ಯಕುಮಾರ್ ಯಾದವ್ ಅವರು 28 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 53 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 24 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 32 ರನ್ ಗಳಿಸಿದರು. ಇನ್ನುಳಿದಂತೆ ವಿರಾಟ್ ಕೊಹ್ಲಿ (24), ರಿಷಬ್ ಪಂಥ್ (20), ಅಕ್ಸರ್ ಪಟೇಲ್ (12), ರೋಹಿತ್ ಶರ್ಮಾ (8), ಅರ್ಷ್ದೀಪ್ (2) ತಂಡಕ್ಕೆ ಬಲ ನೀಡಿದರು. ಅಫ್ಗನ್ ಪರ ಫಜಲ್ಹಕ್ ಫರೂಕಿ ಹಾಗೂ ನಾಯಕ ರಶೀದ್ ಖಾನ್ ತಲಾ 3 ವಿಕೆಟ್ ಕಿತ್ತರು. ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು