ಬೆಂಗಳೂರು: ಭಾರತ ಮತ್ತು ಅಫ್ಗಾನಿಸ್ತಾನ ತಂಡಗಳ ನಡುವಿನ ನಡೆದ ಮೂರನೇ ಟಿ20 ಪಂದ್ಯ ರೋಚಕ ಟೈ ಆಗಿದೆ.ಮೊದಲು ಬ್ಯಾಟ್ ಮಾಡಿದ ಭಾರತ ನಾಯಕ ರೋಹಿತ್ ಶರ್ಮ ಆಕರ್ಷಕ ಶತಕ ಹಾಗೂ ರಿಂಕು ಸಿಂಗ್ ಅರ್ಧ ಶತಕದ ನೆರವಿನಿಂದ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಇದಕ್ಕೆ ಉತ್ತರ ನೀಡಿದ ಅಫ್ಗಾನಿಸ್ತಾನ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿದ ಕಾರಣ
ಪಂದ್ಯ ಟೈ ಆಯಿತು. ಮೊದಲ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಭಾರತ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಗೆದ್ದು ಕೊಂಡಿತು.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ ಆರಂಭಿಕ ಆಘಾತ ಅನುಭವಿಸಿತು. ಕೇವಲ 22ರನ್ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತು.
ಈ ಹಂತದಲ್ಲಿ ರೋಹಿತ್ ಶರ್ಮಾ ಅವರ ಜೊತೆಯಾದ ರಿಂಕು ಸಿಂಗ್ ಉತ್ತಮ ಇನ್ನಿಂಗ್ಸ್ ಕಟ್ಟಿದರು. 20 ಓವರ್ಗಳಲ್ಲಿ ಭಾರತ 4 ವಿಕೆಟ್ ಕಳೆದುಕೊಂಡು 212 ಗಳಿಸಿತು. ರೋಹಿತ್ 69 ಎಸೆತಗಳಲ್ಲಿ 11 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ ಅಜೇಯ 121 ರನ್ ಬಾರಿಸಿದರೆ, ರಿಂಗ್ ಸಿಂಗ್ 39 ಎಸೆತಗಳಲ್ಲಿ 2 ಬೌಂಡರಿ ಹಾಗೂ 6ಸಿಕ್ಸರ್ ನೆರವಿನಿಂದ ಅಜೇಯ 69 ರನ್ ಗಳಿಸಿದರು. ಅಫ್ಗಾನಿಸ್ತಾನ ಪರ 3 ಮಂದಿ ಬ್ಯಾಟರ್ಗಳು ಅರ್ಧ ಶತಕ ಭಾರಿಸಿದರು. ಕೊನೆಯ ಕ್ಷಣದ ವರೆಗೆ ಹೋರಾಟ ನಡೆಸಿದರು.








