ಸಂಪಾಜೆ: ಸಂಪಾಜೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಧ್ವಜಾರೋಹಣ ನೆರವೇರಿಸಿದರು. ವಿಶ್ವದ ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಎಲ್ಲಾ ಧರ್ಮಿಯಾರನ್ನು ಒಟ್ಟಿಗೆ ಕೊಂಡು ಹೋಗುವ ಮೂಲಕ ಭಾರತ ವಿಶ್ವಕ್ಕೆ ಮಾದರಿ ನಾವೆಲ್ಲರೂ ಶಾಂತಿ ಸೌಹಾರ್ದ ಬಲಿಷ್ಠ ಭಾರತ ಕಟ್ಟೋಣ ಎಂದರು. ಕಾರ್ಯಕ್ರಮ ಭಾಗವಹಿಸಿ ಮಾತನಾಡಿದ ಸಂಪಾಜೆ
ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆ ಗ್ರಾಮ ಪಂಚಾಯತ್ ತಳಮಟ್ಟದಲ್ಲಿ ಇರುವ ಸಾರ್ವಜನಿಕ ವ್ಯವಸ್ಥೆ ಗ್ರಾಮದಲ್ಲಿ ಮಾದರಿ ಕೆಲಸ ಆದಾಗ ಹೆಚ್ಚು ಗೌರವ ಬರುತ್ತೆ ನಮ್ಮ ಹಿರಿಯರ ಪರಿಶ್ರಮದಿಂದ ಸ್ವಾತಂತ್ರ್ಯ ದೊರಕಿದೆ ಅದನ್ನು ಉಳಿಸುವ ಕೆಲಸ ಮಾಡೋಣ ಎಂದರು ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಸುಂದರಿ ಮುಂಡಡ್ಕ ನಿಯೋಜಿತ ಅಧ್ಯಕ್ಷೆ ಸುಮತಿ ಶಕ್ತಿವೇಲು, ಉಪಾಧ್ಯಕ್ಷ ಎಸ್. ಕೆ. ಹನೀಫ್ ಸದಸ್ಯರಾದ ರಜನಿ, ಅನುಪಮಾ, ವಿಮಲಾ ಪ್ರಸಾದ್, ವಿಜಯಕುಮಾರ್, ಅಬೂಸಾಲಿ ಪಿ. ಕೆ. ಸುಶೀಲ ಮಾಜಿ ಅಧ್ಯಕ್ಷೆ ಯಮುನಾ. ಕೊಂದಲಕಾಡ್ ನಾರಾಯಣ ಭಟ್, ರವಿ ಶಂಕರ್ ಭಟ್ ಸುಳ್ಯಕೋಡಿ, ಮಾಜಿ ಸದಸ್ಯರಾದ ನಾಗೇಶ್ ಸ್ತ್ರೀ, ಸಂಜೀವಿನಿ ಒಕ್ಕೂಟದ ಸದಸ್ಯರಾದ ಕಾಂತಿ ,ಸೌಮ್ಯ ಅಭಿವೃದ್ಧಿ ಅಧಿಕಾರಿ ಪದ್ಮಾವತಿ, ಸಿಬ್ಬಂದಿ ವರ್ಗ ಅಂಗನವಾಡಿ ಕಾರ್ಯಕರ್ತೆ ಧರ್ಮಕಲಾ, ಹಸೈನಾರ್ ಎ. ಕೆ, ಅಬ್ಬಾಸ್ ಸಂಟ್ಯಾರ್, ಚಿದಾನಂದ ಮಾಸ್ತರ್ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಯೋಗಿಶ್ವರ್, ತ್ಯಾಗರಾಜ್, ಸಲೀಂ ಪೆರುಂಗೋಡಿ, ಉನೈಸ್ ಗೂನಡ್ಕ ಕುಡಿಯುವ ನೀರಿನ ಪಂಪು ಚಾಲಕರು, ಆಶಾ ಕಾರ್ಯಕರ್ತರು, ಸೊಸೈಟಿ ನಿರ್ದೇಶಕರಾದ ಗಣಪತಿ ಭಟ್, ಉಷಾ ರಾಮ್ ನಾಯ್ಕ್ ರಾಜೀವಿ, ಧರ್ಮಸ್ಥಳ ವಿಪತ್ತು ತಂಡದ ಸದಸ್ಯ ಚಿದಾನಂದ ಮತ್ತು ತಂಡ ದಿನಕರ ಸಣ್ಣಮನೆ, ಸಂಜೀವ ಪೂಜಾರಿ ಕಿಲಾರ್ ಪುಟ್ಟಯ್ಯ ಗೌಡ ನಾಗೇಶ್ ಕಾಡುಪಂಜ ಊರ ನಾಗರೀಕರು ಹೆಚ್ಚು ಸಂಖ್ಯೆಯಲ್ಲಿ ಹಾಜರಿದ್ದರು ಪಂಚಾಯತ್ ಸದಸ್ಯರಾದ ಜಗದೀಶ್ ರೈ ಸ್ವಾಗತಿಸಿ ಶೌವಾದ್ ಗೂನಡ್ಕ ವಂದಿಸಿದರು