ಅಹಮ್ಮದಾಬಾದ್: ಕ್ರಿಕೆಟ್ ಏಕದಿನ ವಿಶ್ವಕಪ್ಗೆ ಅ.5ರಂದು ಚಾಲನೆ ದೊರೆಯಲಿದೆ. ಇನ್ನು ಒಂದೂವರೆ ತಿಂಗಳು ಜಗತ್ತಿಗೆ ಕ್ರಿಕೆಟ್ ಹಬ್ಬ. ಪಂದ್ಯಾಟ ಆರಂಭಕ್ಕೆ ಮುನ್ನ ಅ.4ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎಲ್ಲಾ 10 ತಂಡದ ನಾಯಕರು ಒಟ್ಟಾಗಿ ಪೊಟೋಕ್ಕೆ ಪೋಸ್ ನೀಡಿದ ಬಳಿಕ
ಸಂವಾದದಲ್ಲಿ ಭಾಗವಹಿಸಿದರು.ಅ.5ರಂದು ಉದ್ಘಾಟನಾ ಪಂದ್ಯದಲ್ಲಿ 2019ರ ಫೈನಲಿಸ್ಟ್ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಅಹಮ್ಮದಾಬಾದ್ನಲ್ಲಿ ಮುಖಾಮುಖಿಯಾಗಲಿದೆ.
ಟೀಮ್ ಇಂಡಿಯಾ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಈ ಪಂದ್ಯವು ಚೆನ್ನೈನಲ್ಲಿ ನಡೆಯಲಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯವು ಅಕ್ಟೋಬರ್ 14 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಲಿದೆ.
ವೇಳಾಪಟ್ಟಿ
ಈ ಬಾರಿಯ ಏಕದಿನ ವಿಶ್ವಕಪ್ನಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿಯಲಿದ್ದು, 48 ಪಂದ್ಯಗಳು ನಡೆಯಲಿದೆ.
ಪ್ರತಿ ತಂಡಗಳು ಒಟ್ಟು 9 ಪಂದ್ಯಗಳನ್ನಾಡಲಿದೆ. ಇದರಲ್ಲಿ ಅತ್ಯಧಿಕ ಪಾಯಿಂಟ್ಸ್ ಪಡೆಯುವ 4 ತಂಡಗಳು ಸೆಮಿಫೈನಲ್ ಹಂತಕ್ಕೇರಲಿದೆ.
ಸೆಮಿಫೈನಲ್ನಿಂದ ಎರಡು ತಂಡಗಳು ಫೈನಲ್ಗೆ ಎಂಟ್ರಿ ಕೊಡಲಿದೆ. ಫೈನಲ್ ಪಂದ್ಯವು ನವೆಂಬರ್ 19 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ಚಾನೆಲ್ನಲ್ಲಿ ನೇರ ಪ್ರಸಾರ ಇರಲಿದೆ.