ನವದೆಹಲಿ:ಟಿ20 ವಿಶ್ವಕಪ್ ಪಂದ್ಯಾವಳಿ ಮುಗಿದ ಬಳಿಕ ಉತ್ತಮ ಆಟಗಾರರ ಐಸಿಸಿ ಟಿ20 ವಿಶ್ವಕಪ್ ತಂಡವನ್ನು ಘೋಷಿಸಿದೆ. ಚಾಂಪಿಯನ್ ಭಾರತ ತಂಡದ 4 ಮಂದಿ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.ಭಾರತದ ಜಸ್ಪ್ರೀತ್ ಬೂಮ್ರಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೆ
ಐಸಿಸಿ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸಿದೆ.ಸೋಮವಾರ ಐಸಿಸಿಯು ಈ ತಂಡವನ್ನು ಪ್ರಕಟಿಸಿದೆ. ಈ ಸಲದ ಟೂರ್ನಿಯಲ್ಲಿ ಆಡಿದ ಬೇರೆ ಬೇರೆ ತಂಡಗಳ ಪ್ರಮುಖ ಆಟಗಾರರನ್ನೂ ಸೇರ್ಪಡೆ ಮಾಡಲಾಗಿದೆ.
ತಂಡ ಇಂತಿದೆ: ದಕ್ಷಿದ ಆಫ್ರಿಕಾ ತಂಡದ ನಾಯಕ
ಏಡನ್ ಮರ್ಕರಂ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ಕೀಪರ್), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬೂಮ್ರಾ(ಭಾರತ) ಸಾಹೀಬ್ಝಾದಾ ಫರ್ಹಾನ್(ಪಾಕಿಸ್ತಾನ), ವಿಲ್ ಜ್ಯಾಕ್ಸ್ (ಇಂಗ್ಲೆಂಡ್) ಜೇಸನ್ ಹೋಲ್ಡರ್(ವೆಸ್ಟ್ ಇಂಡೀಸ್), ಲುಂಗಿ ಎನ್ಗಿಡಿ(ದಕ್ಷಿಣ ಆಫ್ರಿಕಾ), ಆದಿಲ್ ರಶೀದ್(ಇಂಗ್ಲೆಂಡ್), ಬ್ಲೆಸಿಂಗ್ ಮುಝರಬಾನಿ(ಜಿಂಬಾಬ್ವೆ), ಶಾಡ್ಲೆ ವ್ಯಾನ್ ಶಾಲ್ಕ್ವಿಕ್(ಯುಎಸ್ಎ) (12ನೇ ಆಟಗಾರ).









