ಸುಳ್ಯ: ಹಲವು ದಿನಗಳ ಬಳಿಕ ಮೇ.21 ರಂದು ರಾತ್ರಿ ಸುಳ್ಯ ನಗರದಲ್ಲಿ ಭಾಈ ಮಳೆಯಾಗಿದೆ. ಗುಡುಗು, ಸಿಡಿಲಿನ ಅಬ್ಬರದೊಂದಿಗೆ ಭರ್ಜರಿ ಮಳೆ ಸುರಿಯಿತು. ರಾತ್ರಿ ವೇಳೆಗೆ ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿತ್ತು. ಸುಳ್ಯದಲ್ಲಿ ರಾತ್ರಿ 9.30ರ ಬಳಿಕ ಸುಮಾರು ಒಂದು ಗಂಟೆಗೂ ಹೆಚ್ಚು ಹೆಚ್ಚು ಸಮಯ
ಮಳೆ ಬಂದಿದೆ. ಕಿವಿಗಪ್ಪಳಿಸುವ ಗುಡುಗು ಮತ್ತು ಮಿಂಚು ಭಯ ಹುಟ್ಟಿಸಿದೆ. ಮಳೆ ಆರಂಭವಾಗುತ್ತಿದ್ದಂತೆ ವಿದ್ಯುತ್ ನಸಪತ್ತೆಯಾಗಿದ್ದು ಜನರು ಕತ್ತಲಲ್ಲಿ ಕಳೆಯುವಂತಾಗಿದೆ.
ಸುಳ್ಯ, ಕಡಬ ತಾಲೂಕಿನ ವಿವಿಧ ಕಡೆಗಳಲ್ಲಿ ಮೋಡ ಕವಿದ ವಾತಾವರಣ ಇದ್ದು ವಿವಿಧ ಕಡೆ ಮಳೆಯಾಗಿದೆ. ಪಂಜ, ಕೇನ್ಯ ಗಾಳಿ ಗುಡುಗು ಸಿಡಿಲು ಸಹಿತ ಭರ್ಜರಿ ಮಳೆಯಾಗಿದೆ.ಕಡಬ, ಪುತ್ತೂರು ಮಳೆಯಾಗಿದೆ. ಮರ್ಕಂಜ, ಶೇಣಿ ಕಳಂಜ, ಪೆಲತಡ್ಕ, ಕುದ್ಮಾರು, ಪಂಜಿಕ್ಕಲ್ಲು , ಕುಲ್ಕುಂದ, ಮುರುಳ್ಯ ಗ್ರಾಮದ ಶೇರದಲ್ಲಿ, ಬೆಳ್ಳಾರೆ ಕಾವಿನಮೂಲೆ, ಕಲ್ಮಡ್ಕ ಕೊಲ್ಲಮೊಗ್ರ, ಕೋಟೆ ಮುಂಡುಗಾರು, ಮರ್ಧಾಳ, ಬಾಳಿಲ,ನೆಕ್ರಕಜೆ,ಬಳ್ಪ ಪಟೋಳಿಯಲ್ಲಿ, ದೊಡ್ಡತೋಟದ ಬಳಿ ಕಿಲಾರ್ಕಜೆ ಮತ್ತಿತರ ಕಡೆಗಳಲ್ಲಿ ಗುಡುಗು, ಸಿಡಿಲು, ಗಾಳಿಯ ಅಬ್ಬರದೊಂದಿಗೆ ಮಳೆ ಸುರಿದಿದೆ. ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಸುಂಕದಕಟ್ಟೆ ಬಳಿ ಮರ ರಸ್ತೆಗುರುಳಿ ಸಂಚಾರ ಕ್ಕೆ ಅಡಚಣೆ ಉಂಟಾಗಿದೆ.ಪುಣಚ, ಕನ್ಯಾನದಲ್ಲಿ ಮಳೆಯಾಗಿದೆ. ಒಟ್ಟಿನಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಭಾರೀ ಮಳೆಯಾಗಿದೆ.