ಸುಳ್ಯ: ಸುಳ್ಯ ನಗರದಲ್ಲಿ ಗುರುವಾರ ಹಗಲು ಉತ್ತಮ ಮಳೆಯಾಗಿದೆ. ಗುಡುಗು ಸಿಡಿಲಿನ ಅಬ್ಬರದೊಂದಿಗೆ ಮಳೆ ಸುರಿದಿದೆ. ಮಧ್ಯಾಹ್ನ 3 ಗಂಟೆಯ ಬಳಿಕ ಉತ್ತಮ ಮಳೆಯಾಗಿದೆ. ಕತ್ತಲು ಕವಿದ ವಾತಾವರಣದಲ್ಲಿ ಗುಡುಗು ಸಿಡಿಲಿನ ಅಬ್ಬರದಲ್ಲಿ ಸುಮಾರು ಅರ್ಧ
ಗಂಟೆಯಿಂದ ಮಳೆಯಾಗಿದ್ದು ಉತ್ತಮ ಮಳೆ ಮುಂದುವರಿದಿದೆ. ಗುಡುಗು ಸಿಡಿಲು ದಿಗಿಲು ಹುಟ್ಟಿಸಿದೆ. ತಾಲೂಕಿನ ವಿವಿಧ ಭಾಗಗಳಲ್ಲಿ ಗುಡುಗು ಸಿಡಿಲಿನೊಂದಿಗೆ ಮಳೆಯಾಗಿದೆ. ಕಳೆದ 3-4 ದಿನಗಳಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಕರಾವಳಿ ಸೇರಿ ಇನ್ನೂ ಕೆಲವು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಜೂನ್ 4 ರಂದು ಮುಂಗಾರು ಮಳೆ ಕೇರಳಕ್ಕೆ ಪ್ರವೇಶ ಪಡೆಯಲಿದ್ದು ಜೂ.9ರ ವೇಳಗೆ ರಾಜ್ಯದಲ್ಲಿಯೂ ಮುಂಗಾರು ಆರಂಭವಾಗಲಿದೆ. ಇದೀಗ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು ಮಳೆಗಾಲಕ್ಕೆ ಮುನ್ನುಡಿ ಬರೆದಿದೆ.