ಸುಳ್ಯ:ಸುಳ್ಯ ಮೊಗರ್ಪಣೆ ವೆಂಕಟರಮಣ ಸೊಸೈಟಿ ಬಳಿ ಇಂಜಿನಿಯರ್ ಖಲಂದರ್ ಎಲಿಮಲೆ ಮತ್ತು ಮೊಯ್ದೀನ್ ಅಜ್ಮಿರಿಯಾ ಮಾಲಕತ್ವದ ಹೆಚ್ ಬಿ ಸ್ಪೋರ್ಟ್ಸ್ ಮ್ಯಾಕ್ಸ್ ಕ್ರೀಡಾ ಸಾಮಾಗ್ರಿಗಳ ಮಾರಾಟ ಮಳಿಗೆ ಜ.11 ರಂದು ಶುಭಾರಂಭ ಗೊಂಡಿತು.ಇದರ ಉದ್ಘಾಟನೆಯನ್ನು ನೆಹರು ಮೆಮೊರಿಯಲ್ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಧಾಕೃಷ್ಣ ಮಾಣಿಬೆಟ್ಟು ಹಾಗೂ ಮಹಿಳಾ ಸಮಾಜ ಅಧ್ಯಕ್ಷೆ ಪುಷ್ಪಾರಾಧಕೃಷ್ಣ ನೆರೆವೆರಿಸಿದರು. ಕಾರ್ಯಕ್ರಮದಲ್ಲಿ


ಸುಳ್ಯ ಅಲ್ಪಸಂಖ್ಯಾತ ಸೊಸೈಟಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ ಅಧ್ಯಕ್ಷತೆ ವಹಿಸಿದ್ದರು. ನಗರ ಪಂಚಾಯತ್ ಮಾಜಿ ಸದಸ್ಯರಾದ ಹಾಜಿ ಕೆ.ಎಂ. ಮುಸ್ತಫಾ, ಸದಸ್ಯರಾದ ಉಮ್ಮರ್ ಕೆ ಎಸ್,ಶರೀಫ್ ಕಂಠಿ,ಡೇವಿಡ್ ಧೀರಾ ಕ್ರಾಸ್ತ, ರಿಯಾಜ್ ಕಟ್ಟೆಕ್ಕಾರ್,ಸೂರ್ಯ ಬ್ಯಾಟರಿ ಮಳಿಗೆ ಮಾಲಕ ಚಂದ್ರಶೇಖರ, ಗ್ರೀನ್ ಬಾಯ್ಸ್ ಅಸೋಸಿಯೇಷನ್ ಅಧ್ಯಕ್ಷ ಶಿಹಾಬ್ ಷಾ, ಸಿದ್ದೀಕ್ ಕಟ್ಟೆಕ್ಕಾರ್,ಶಮೀರ್ ಶಾಂತಿನಗರ,ನಿಝಾರ್ ಶಾಂತಿನಗರ, ಆಲ್ತಾಫ್ ಜಟ್ಟಿಪಳ್ಳ, ಮಾಸ್ಟರ್ ಇಷಾನ್ ಇಬ್ರಾಹಿಂ, ಮಾಸ್ಟರ್ ಇಯಾಸ್ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಪ್ರಥಮ ಗ್ರಾಹಕರಾಗಿ ಯಲ್ಲಪ್ಪ ಸಹಕರಿಸಿದರು. ಸಂಸ್ಥೆಯ ಮಾಲಕರಾದ ಖಲಂದರ್ ಎಲಿಮಲೆ ಸ್ವಾಗತಿಸಿ ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ಸಿರಾಜ್ ಜಟ್ಟಿಪಳ್ಳ ಸಹಕರಿಸಿದರು.

ಕ್ರೀಡಾ ಸಾಮಾಗ್ರಿ, ಟ್ರೋಫಿಗಳ ಅಪೂರ್ವ ಸಂಗ್ರಹ:
ಹೆಚ್ ಬಿ ಸ್ಪೋರ್ಟ್ಸ್ ಮ್ಯಾಕ್ಸ್ ಕ್ರೀಡಾ ಸಾಮಾಗ್ರಿಗಳ ಮಾರಾಟ ಮಳಿಗೆಯಲ್ಲಿ ಅತ್ಯಾಧುನಿಕ ಹಾಗೂ ಲೇಟೆಸ್ಟ್ ಮಾದರಿಯ ಎಲ್ಲಾ ಕ್ರೀಡಾ ಸಾಮಾಗ್ರಿಗಳ, ಟ್ರೋಫಿ, ಮೊಮೆಂಟೋಗಳ ಅಪೂರ್ವ ಮತ್ತು ಅತ್ಯಾಕರ್ಷಕ ಸಂಗ್ರಹವೇ ಬಂದಿದೆ.
ಕ್ರಿಕೆಟ್ ಬ್ಯಾಟ್, ವಿಕೆಟ್, ಬಾಲ್, ವಾಲಿಬಾಲ್, ಪುಟ್ಬಾಲ್, ನೆಟ್ ಸೇರಿದಂತೆ ಎಲ್ಲಾ ಕ್ರೀಡಾ ಸಾಮಾಗ್ರಿಗಳು, ಟ್ರೋಫಿ, ಮೊಮೆಂಟೊಗಳು, ಕ್ರೀಡಾ ಸಮವಸ್ತ್ರಗಳು, ಜರ್ಸಿಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು.

ಶಾಲಾ ಕಾಲೇಜುಗಳಲ್ಲಿ ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಾಗ್ರಿಗಳು, ಕ್ರೀಡಾ ಸಮವಸ್ತ್ರವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಹೆಚ್ ಬಿ ಸ್ಪೋರ್ಟ್ಸ್ ಮ್ಯಾಕ್ಸ್ ‘ನ ಮಾಲಕರಾದ ಖಲಂದರ್ ಎಲಿಮಲೆ ತಿಳಿಸಿದ್ದಾರೆ.











