ಹರಿಹರ:ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗು ಸುಳ್ಯ ಮತ್ತು ಪಂಜ ಹೋಬಳಿ ಘಟಕಗಳ ಆಶ್ರಯದಲ್ಲಿ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕರ್ನಾಟಕ ರಾಜ್ಯ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಹರಿಹರ ಪಲ್ಲತ್ತಡ್ಕ ಕ್ಲಸ್ಟರ್ ನ 10 ಶಾಲೆಗಳಿಗೆ ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಭಾವಚಿತ್ರ ಹಾಗೂ ಪುಸ್ತಕಗಳ ವಿತರಣಾ
ಕಾರ್ಯಕ್ರಮ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತ್ಯ ಪರಿಷತ್ತಿನ ಅದ್ಯಕ್ಷ ಚಂದ್ರಶೇಖರ್ ಪೇರಾಲ್ ವಹಿಸಿದ್ದರು. 5ಶಾಲೆಗಳಿಗೆ ಪ್ರಾಯೋಜಕರಾದ ಕು ಸಿ ಲೋಕಯ್ಯ ಇವರು ಭಾವಚಿತ್ರಗಳನ್ನು ಶಾಲಾ ಮುಖ್ಯಸ್ಥರಿಗೆ ಹಾಗು ಹರಿಹರ ಕೊಲ್ಲಮೊಗ್ರು ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಉಪಾಧ್ಯಕ್ಷರಾದ ಶೇಖರ್ 5 ಶಾಲೆಗಳಿಗೆ ಭಾವಚಿತ್ರ ಹಸ್ತಾಂತರಿಸಿದರು. ವಕೀಲ ಪ್ರದೀಪ್ ಕುಮಾರ್ ಕೆ ಎಲ್ ಇವರು ಲೇಖನ ಸಾಮಾಗ್ರಿಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಪಂಜ ಹೋಬಳಿ ಘಟಕದ ಅಧ್ಯಕ್ಷ ಬಾಬು ಗೌಡ , ಕೋಶಾಧಿಕಾರಿ ಪ್ರಭಾಕರ ಕಿರಿಭಾಗ, ತೇಜಸ್ವಿ ಕಡಪಳ , ಸಮೂಹ ಸಂಪನ್ಮೂಲ ವ್ಯಕ್ತಿ ಕುಶಾಲಪ್ಪ ತುಂಬತ್ತಾಜೆ ಹಾಗು ಶಾಲಾ ಮುಖ್ಯಸ್ಥರು, ಶಿಕ್ಷಕರು ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸುಳ್ಯ ತಾಲೂಕಿನ ಒಟ್ಟು 105 ಶಾಲೆಗಳಲ್ಲಿ ಈ ಯೋಜನೆಯ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದರು.









