ಗುತ್ತಿಗಾರು:ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಗುತ್ತಿಗಾರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅರೆ ಭಾಷೆ ಸಂಸ್ಕೃತಿ ಮತ್ತು ಕಲಾ ಶಿಬಿರ ವನ್ನು ಏರ್ಪಡಿಸಲಾಯಿತು ಶಿಬಿರವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಅಶೋಕ್ ನೆಕ್ರಾಜೆ ಇವರು ಉದ್ಘಾಟಿಸಿದರು. ಪ್ರಾದೇಶಿಕ ಭಾಷೆಗಳನ್ನು ಉಳಿಸಿ ಬೆಳೆಸುವ
ಮಹತ್ತರವಾದ ಜವಾಬ್ದಾರಿ ಭಾಷೆಯನ್ನು ಮಾತನಾಡುವವರಿಗೆ ಇರಬೇಕು, ಭಾಷೆಯನ್ನು ಮಾತನಾಡಿ ಅದರ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಅರೆಭಾಷೆ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ವಹಿಸಿ ಶಾಲಾ-ಕಾಲೇಜುಗಳಲ್ಲಿ ಅರೆಭಾಷೆಯನ್ನು ಉಳಿಸಿ ಬೆಳೆಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಅಂಬೆಕಲ್ಲು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಪರಶುರಾಮ ಚಿಲ್ತಡ್ಕ ಕಾಲೇಜಿನ ಪ್ರಾಂಶುಪಾಲೆ ಚೆನ್ನಮ್ಮ ಪಿ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವನಾಥ ಸಾಲ್ತಾಡಿ, ಬಾಬು ಗೌಡ ಅಚ್ರಪಾಡಿ ಅಕಾಡೆಮಿ ಸದಸ್ಯರಾದ ಕಾರ್ಯಪ್ಪ ಪಿ.ಎಸ್, ಚಂದ್ರಾವತಿ ಬಡ್ಡಡ್ಕ, ಪ್ರೌಢಶಾಲಾ ವಿಭಾಗದ ಶಿಕ್ಷಕಿ ಸಾವಿತ್ರಿ ಇವರು ಉಪಸ್ಥಿತರಿದ್ದರು. ಅಕಾಡಡಮಿ ಸದಸ್ಯರಾದ ಚಂದ್ರಶೇಖರ ಪೆರಾಲ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಚಂದ್ರಾವತಿ ಬಡ್ಡಡ್ಕ ವಂದಿಸಿದರು. ರಂಜಿತ್ ಅಂಬೆಕಲ್ಲು ಕಾರ್ಯಕ್ರಮ ನಿರೂಪಿಸಿದರು. ವಿವಿಧ ಕಾರ್ಯಕ್ರಮಗಳಲ್ಲಿ ಕೆ ಆರ್ ಗೋಪಾಲಕೃಷ್ಣ, ಪಟ್ಟಾಭಿರಾಮ ಸುಳ್ಯ, ವಿನೋದ್ ಮೂಡಗದ್ದೆ ಮಮತಾ ರವೀಶ್ ಪಡ್ಡಂಬೈಲ್, ಯಶವಂತ ಕುಡೆಕಲ್ಲು, ಬಾಬುಗೌಡ ಅಚ್ರಪಾಡಿ,ಸುಭಾಷ್ ಪಂಜ, ಲೋಕೇಶ್ ಪೀರನಮನೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.















