ಬೆಂಗಳೂರು: ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿದ ಹರಿಹರ ಕೊಲ್ಲಮೊಗ್ರು ಗ್ರಾಮದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಅನುದಾನ ನೀಡಬೇಕು, ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಹರಿಹರ, ಕೊಲ್ಲಮೊಗ್ರ ಗ್ರಾಮದ ಗ್ರಾಮಸ್ಥರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು. ಗ್ರಾಮದ ಕಂದಾಯ, ಅರಣ್ಯ ಸಮಸ್ಯೆ ಪರಿಹಾರಿಸಬೇಕು, ಗ್ರಾಮದ ವಿವಿಧ

ಅಭಿವೃದ್ಧಿಗೆ ಅನುದಾನ ನೀಡಬೇಕು ಮತ್ತಿತರ ವಿವಿಧ ಬೆಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು. ಸ್ಪೀಕರ್ ಯು.ಟಿ.ಖಾದರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೂ ಮನವಿ ಸಲ್ಲಿಸಲಾಯಿತು. ಕಲ್ಮಕಾರು ಶಾಲಾ ಜಮೀನನ್ನು ಶಾಲಾ ಹೆಸರಿನಲ್ಲಿ ಮಾಡಿ ಕೊಡುವಂತೆ, ಬೆಂಡೋಡಿ ಸರಕಾರಿ ಶಾಲೆಗೆ ಶೌಚಾಲಯ, ರಂಗಮಂದಿರ ಮತ್ತಿತರ ಸೌಲಭ್ಯ ಕಲ್ಪಿಸುವಂತೆ, ಸೇರಿದಂತೆ ಗ್ರಾಮ ವಾಸ್ತವ್ಯ ನಡೆದ

ಅವಳಿ ಗ್ರಾಮಕ್ಕೆ ಸಂಬಂಧಿಸಿದಂತೆ ಗ್ರಾಮ ವಾಸ್ತವ್ಯದಲ್ಲಿ ಸಲ್ಲಿಸಿದ ಮನವಿಗೆ ಆದ್ಯತೆ ನೆಲೆಯಲ್ಲಿ ಪರಿಹಾರ ಹಾಗೂ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಯಿತು. ಶಾಸಕಿ ಭಾಗೀರಥಿ ಮುರುಳ್ಯ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಮುಖರಾದ ಮಾಧವ ಚಾಂತಾಳ, ಉದಯ ಶಿವಾಲ, ಹರಿಪ್ರಸಾದ್ ಮಲ್ಲಾಜೆ , ಗ್ರಾಮಸ್ಥರು, ಬೆಂಡೋಡಿ ಶಾಲಾ ಎಸ್ಡಿಎಂಸಿ ಪದಾಧಿಕಾರಿಗಳು, ಪತ್ರಕರ್ತರ ಸಂಘದ ಪದಾಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.









