ಸುಳ್ಯ: ಸುಳ್ಯ ಸ.ಪ.ಪೂ. ಕಾಲೇಜಿನ ಸುಳ್ಯ ಇದರ ಪ್ರೌಢ ಶಾಲಾ ವಿಭಾಗದ ನವೀಕೃತ ಕಛೇರಿಯನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ 2022 – 23ನೇ ಸಾಲಿನಲ್ಲಿ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ 31 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಇದರೊಂದಿಗೆ ಕಳೆದ ವರ್ಷ
ನಡೆದ ರಾಜ್ಯಮಟ್ಟದ ಎನ್. ಎಂ. ಎಂ. ಎಸ್. ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ 11 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಮುಟ್ಟುಗುಟ್ಟಲ್ಲ ಎನ್ನುವ ಆರೋಗ್ಯ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನೂತನ ಶಾಸಕರನ್ನು ಪೋಷಕರ, ಶಿಕ್ಷಕರ, ವಿದ್ಯಾರ್ಥಿಗಳ ಪರವಾಗಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಕಾಡುತೋಟ ವಹಿಸಿದ್ದರು. ಹಿರಿಯ ವಿದ್ಯಾರ್ಥಿ, ಪ್ರಾಧ್ಯಾಪಕಿ ಡಾ. ಸುಭಾಷಿಣಿ ಶ್ರೀವತ್ಸ ಪ್ರಧಾನ ಭಾಷಣ ಗೈದರು. ವೇದಿಕೆಯಲ್ಲಿ ಪ್ರಾಂಶುಪಾಲರಾದ ಕಾಲೇಜಿನ ಮೋಹನ ಗೌಡ, ಸಂಪನ್ಮೂಲ ವ್ಯಕ್ತಿಗಳಾದ ಡಾ. ವೀಣಾ, ಮುಟ್ಟು – ಗುಟ್ಟಲ್ಲ ಕಾರ್ಯಕ್ರಮದ ಸಂಯೋಜಕರಾದ ಜಲಜಾಕ್ಷಿ ಕೆ.ಡಿ, ಎಂ.ಬಿ.ಸದಾಶಿವ, ಲೋಕಯ್ಯ ಗೌಡ ಎ, ಪ್ರದೀಪ್, ಶಿಕ್ಷಣ ಸಂಯೋಜಕರಾದ ನಳಿನಿ ಕೆ, ಎಸ್ ಡಿ.ಎಮ್.ಸಿ. ಸದಸ್ಯರಾದ ಪುಟ್ಟಣ್ಣ, ಜಯರಾಮ, ಲತಾ ರೈ, ಕವಿತಾ, ರೇಖಾ ಉಪಸ್ಥಿತರಿದ್ದರು. ಉಪಪ್ರಾಂಶಪಾಲರಾದ ಪ್ರಕಾಶ ಮೂಡಿತ್ತಾಯ ಸ್ವಾಗತಿಸಿ, ಹಿರಿಯ ಶಿಕ್ಷಕರಾದ ಡಾ. ಸುಂದರ ಕೇನಾಜೆ ವಂದಿಸಿದರು. ಶಿಕ್ಷಕರಾದ ಪೂರ್ಣಿಮಾ, ವೀಣಾ , ಸೋನಾಲಿ, ಲತಾ ಪೈ ಸಹಕರಿಸಿದರು ಶಿಕ್ಷಕಿ ಪೂರ್ಣಿಮಾ ಟಿ ಕಾರ್ಯಕ್ರಮವನ್ನು ನಿರೂಪಿಸಿದರು.