ಸುಳ್ಯ: ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ನಡೆಯಿತು.ಕಾಲೇಜಿನ ಹಳೆ ವಿದ್ಯಾರ್ಥಿ,ಮಂಗಳೂರು ಸಿ.ಸಿ.ಬಿ ಬ್ರಾಂಚ್ ಇಲ್ಲಿಯ ಪೋಲಿಸ್ ಕಾನ್ಸ್ಸ್ಟೇಬಲ್ ಅಭಿಷೇಕ್ ಎ.ಆರ್. ಉದ್ಘಾಟಿಸಿದರು.ಸಭೆಯ ಅಧ್ಯಕ್ಷತೆಯನ್ನು
ಕಾಲೇಜಿನ ಪ್ರಾಂಶುಪಾಲ ಸತೀಶ್ ಎನ್. ಪಿ ವಹಿಸಿದ್ದರು. ಈ ಸಂದರ್ಭದಲ್ಲಿ ಅಭಿಷೇಕ್ ಎ ಆರ್ ಇವರನ್ನು ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ ಸಾಧನೆಗಾಗಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.ಪಥಸಂಚಲನ, ಕ್ರೀಡಾ ಜ್ಯೋತಿ ಆಗಮನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ದೈಹಿಕ ಶಿಕ್ಷಣ ನಿರ್ದೇಶಕರಾದ ಸತೀಶ್ ಕುಮಾರ್ ಕೆ ಆರ್, ಐ.ಕ್ಯೂ.ಎ.ಸಿ ಸಂಚಾಲಕಿ, ಡಾ ಪ್ರೀತಿ ಕೆ ರಾವ್, ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜಿನ ದೈಹಿಕ ಶಿಕ್ಷಕ ಪವನ್ ಕುಮಾರ್, ರೋಟರಿ ಶಾಲೆಯ ದೈಹಿಕ ಶಿಕ್ಷಕ ರಂಗನಾಥ್ ಕ್ರೀಡಾ ನಾಯಕ ದೀಕ್ಷಿತ್ ಎಂ.ಎಸ್ ಉಪಸ್ಥಿತರಿದ್ದರು. ಉಪನ್ಯಾಸಕರಾದ ಅನಿತಾ ಕುಮಾರಿ ಸ್ವಾಗತಿಸಿ, ಕಿಶೋರ್ ಕುಮಾರ್ ವಂದಿಸಿದರು, ರಾಮಕೃಷ್ಣ ಕೆ ಎಸ್ ಕರ್ಯಕ್ರಮ ನಿರೂಪಿಸಿದರು. ಸಭಾ ಕರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ಅತ್ಲೆಟಿಕ್ಸ್ ಕ್ರೀಡಾಕೂಟಗಳು ಜರಗಿದವು.










