ವಿಶಾಖಪಟ್ಟಣ: ಶುಭ್ಮನ್ ಗಿಲ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಇಂಗ್ಲೆಂಡ್ ಎದುರು ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್ಗೆ 399 ರನ್ಗಳ ಕಠಿಣ ಗುರಿಯೊಡ್ಡಿದೆ. ಭಾನುವಾರ ದಿನದಾಟದ ಮುಕ್ತಾಯಕ್ಕೆ ಇಂಗ್ಲೆಂಡ್ 1 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದೆ. ಗಿಲ್
147 ಎಸೆತಗಳಲ್ಲಿ 104 ರನ್ ಗಳಿಸಿದರು. ಶನಿವಾರ ದಿನದಾಟದ ಮುಕ್ತಾಯಕ್ಕೆ ಭಾರತ ತಂಡವು ಎರಡನೇ ಇನಿಂಗ್ಸ್ನಲ್ಲಿ ವಿಕೆಟ್ ನಷ್ಟವಿಲ್ಲದೇ 28 ರನ್ ಗಳಿಸಿತ್ತು. ಭಾನುವಾರ ಬೆಳಿಗ್ಗೆ ಆಟ ಮುಂದುವರಿಸಿದ ಭಾರತ ತಂಡಕ್ಕೆ ರೋಹಿತ್ ಮತ್ತು ಮೊದಲ ಇನಿಂಗ್ಸ್ ದ್ವಿಶತಕ ಸಾಧಕ ಯಶಸ್ವಿ ಜೈಸ್ವಾಲ್ ಬೇಗನೇ ಔಟ್ ಆದರು.ಮೂರನೇ ವಿಕೆಟ್ ಜೊತೆಯಾಟದಲ್ಲಿ ಗಿಲ್ ಅವರು ಶ್ರೇಯಸ್ ಅಯ್ಯರ್ ಜೊತೆಗೆ 81 ರನ್ ಗಳಿಸಿದರು. ಅಕ್ಷರ್ ಪಟೇಲ್ ಜೊತೆಗೆ ಐದನೇ ವಿಕೆಟ್ಗೆ 89 ರನ್ ಸೇರಿಸಿದರು. 132 ಎಸೆತಗಳಲ್ಲಿ ಶತಕದ ಗಡಿ ತಲುಪಿದರು. ಅದರಲ್ಲಿ 11 ಬೌಂಡರಿ ಮತ್ತು ಎರಡು ಸಿಕ್ಸರ್ಗಳು ಸೇರಿದ್ದವು. ಟೆಸ್ಟ್ ಕ್ರಿಕೆಟ್ನಲ್ಲಿ ಇದು ಅವರ 3ನೇ ಶತಕ.ಅಕ್ಷರ್ ಮತ್ತು ಅಶ್ವಿನ್ (29 ರನ್) ಅವರು ತಂಡದ ಮೊತ್ತ ಹೆಚ್ಚಿಸುವಲ್ಲಿ ಕಾಣಿಕೆ ನೀಡಿದರು. ಆದರೆ ಸ್ಪಿನ್ನರ್ ಟಾಮ್ ಹಾರ್ಟ್ಲಿ (77ಕ್ಕೆ4) ಮತ್ತು ರೆಹಾನ್ ಅಹಮದ್ (88ಕ್ಕೆ3) ಅವರು ಪರಿಣಾಮಕಾರಿ ದಾಳಿ ನಡೆಸಿ ಆತಿಥೇಯ ತಂಡದ ಇನ್ನೀಂಗ್ಸ್ 255 ರನ್ಗಳಿಗೆ ಮುಗಿಸಿತು.
ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡದ ಬೆನ್ ಡಕೆಟ್ (28 ರನ್) ಅವರ ವಿಕೆಟ್ ಅಶ್ವಿನ್ ಉರುಳಿಸಿದ್ದಾರೆ. ಜಾಕ್ ಕ್ರಾಲಿ (ಬ್ಯಾಟಿಂಗ್ 29) ಮತ್ತು ರೆಹಾನ್ (ಬ್ಯಾಟಿಂಗ್ 9) ಕ್ರೀಸ್ನಲ್ಲಿದ್ದಾರೆ.









