ಸುಳ್ಯ: ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಗ್ರೇಡ್ 1 ಕಾರ್ಯದರ್ಶಿಯಾಗಿ ಅರಂತೋಡಿನ ಗೀತಾ ಶೇಖರ್ ಅವರು ನೇಮಕಗೊಂಡಿದ್ದಾರೆ. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಯು.ಡಿ ಶೇಖರ್ ಅವರು ಸರಕಾರಿ ಸೇವೆಯಲ್ಲಿ
ಇರುವಾಗಲೇ ಅಕಾಲಿಕವಾಗಿ ಮರಣ ಹೊಂದಿದ ಕಾರಣ ಅನುಕಂಪದ ಅಧಾರದಲ್ಲಿ ಸರಕಾರ ಯು ಡಿ ಶೇಖರ್ ಅವರ ಪತ್ನಿ ಗೀತಾ ಶೇಖರ್ ಅವರಿಗೆ ಪಂಚಾಯತ್ ಕಾರ್ಯದರ್ಶಿ ಗ್ರೇಡ್ ವನ್ ಹುದ್ದೆಗೆ ನೇಮಕಾತಿ ಆದೇಶ ನೀಡಿದೆ. ಗೀತಾ ಶೇಖರ್ ಅವರು ಆ.24 ರಂದು ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಲ್ಲಿ ಆದೇಶ ಪ್ರತಿಯೊಂದಿಗೆ ಹಾಜರಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ