ಸುಳ್ಯ:ಸಂಘಟನೆಯ ಮೂಲಕ ಗಾಣಿಗ ಸಮುದಾಯ ಇನ್ನಷ್ಟು ಅಭಿವೃದ್ಧಿ ಆಗಬೇಕು. ಸಂಘಟಿತರಾಗಿ ಎಲ್ಲಾ ಸೌಲಭ್ಯಗಳನ್ನು, ಅವಕಾಶಗಳನ್ನು ಪಡೆದುಕೊಳ್ಳಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ. ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವತಿಯಿಂದ ಸುಳ್ಯ ಕೇರ್ಪಳ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ಅ.1ರಂದು ನಡೆದ ಗಾಣಿಗ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ
ಅವರು ಮಾತನಾಡಿದರು.
ಬೆಂಗಳೂರು ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಶ್ರೀ
ಪೂರ್ಣಾನಂದ ಪುರಿ ಮಹಾಸ್ವಾಮೀಜಿ ಆಶೀರ್ವಚನ ನೀಡಿ ‘ಗಾಣಿಗ ಸಮುದಾಯವನ್ನು ಒಟ್ಟಾಗಿಸಲು ಸಂಘಟನೆ ಸ್ಥಾಪಿಸಲಾಗಿದೆ. ಆ ಬಳಿಕ ಸಮುದಾಯವು ಸಾಕಷ್ಟು ಸಂಘಟಿತರಾಗಿದ್ದಾರೆ, ಸಮುದಾಯದ ಮಧ್ಯೆ ಸಂಬಂಧಗಳು ಬೆಳೆದಿದೆ. ಸಂಘಟನೆಯನ್ನು ಕಟ್ಟಿ ಬೆಳೆಸುವವರಿಗೆ ಸಮುದಾಯ ಪ್ರೋತ್ಸಾಹ ನೀಡಬೇಕು ಎಂದು ಅವರು ಹೇಳಿದರು.ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನದ ವತಿಯಿಂದ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಲಾಗುತಿದೆ.ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬೆಳೆಸಲು ಎಲ್ಲಾ ಪ್ರೋತ್ಸಾಹ ನೀಡಲಾಗುತಿದೆ ಎಂದು ಹೇಳಿದರು. ನೈತಿಕವಾಗಿ ಮತ್ತು ಸಂಸ್ಕಾರಯುತವಾಗಿ ಬದುಕಿ ಮನುಷ್ಯ ಜೀವನವನ್ನು ಸಾರ್ಥಕವಾಗಿಸಬೇಕು ಎಂದು ಕರೆ ನೀಡಿದ ಅವರು ಮಕ್ಕಳಿಗೆ ಸಂಸ್ಕಾರ ಮತ್ತು ನೈತಿಕತೆಯನ್ನು ಕಲಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಮಾಜಿ ಸ್ಪೀಕರ್ ಸುದರ್ಶನ್ ಮಾತನಾಡಿ’ ಸರಕಾರ ಬಜೆಟ್ನಲ್ಲಿ ಘೋಷಿಸಿರುವ ಅನುದಾನಗಳನ್ನು ಸಮಾನಾಗಿ ಹಂಚಿ ಸಾಮಾಜಿಕ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಲು ಪ್ರತಿ ಸಮುದಾಯದ ಗಣತಿ ಮಾಡಬೇಕಾಗಿರುವುದು ಅತೀ ಅಗತ್ಯ ಎಂದರು. ಸಂಘಟನೆ, ಜಾಗೃತಿ ಇದ್ದರೆ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಅವರು ಹೇಳಿದರು.

ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಉದ್ದಂತಡ್ಕ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ರಾಜ್ಯ ಗಾಣಿಗರ ಸಂಘದ ಅಧ್ಯಕ್ಷ ರಾಜಶಖರ್,ಅಖಿಲ ಕರ್ನಾಟಕ ರಾಜ್ಯ ಗಾಣಿಗರ ಸಂಘದ ಉಪಾಧ್ಯಕ್ಷ ಅಂಕ ಶೆಟ್ಟಿ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಪಾಟಾಳಿ ಪರಿವಾರಕಾನ, ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅಪ್ಪು ಪಾಟಾಳಿ ಜಯನಗರ, ನಿವೃತ್ತ ಉಪ ತಹಶೀಲ್ದಾರ್ ಮಹಾಲಿಂಗ ದೇರೆಬೈಲು, ಸಂಘದ ಆಂತರಿಕ ಲೆಕ್ಕ ಪರಿಶೋಧಕ ಮಹಾಲಿಂಗನ್ ಬಾಜರ್ತೊಟ್ಟಿ, ಸ್ವಿಗ್ಗಿ ಇಂಡಿಯಾ ನಿರ್ದೇಶಕ ಪ್ರೀತಮ್ ಕೆ.ಎಸ್, ಚಾರ್ಟೆಡ್ ಅಕೌಂಟೆಂಟ್ ದಯಾನಂದ ಕೆ, ಮಂಗಳೂರು ವಾಣಿಯ ಗಾಣಿಗ ಸಂಘದ ಅಧ್ಯಕ್ಷ ರಾಮ ಮುಗ್ರೋಡಿ, ಪುತ್ತೂರು ವಾಣಿಯ ಗಾಣಿಗ ಸಂಘದ ಅಧ್ಯಕ್ಷ ಪ್ರಸಾದ್ ಬಾಕಿಮಾರ್, ವಿಟ್ಲ ವಾಣಿಯ ಗಾಣಿಗ ಸಂಘದ ಅಧ್ಯಕ್ಷ ಉದಯ ದಂಬೆ, ಈಶ್ವರಮಂಗಲ ವಾಣಿಯ ಗಾಣಿಗ ಸಂಘದ ಅಧ್ಯಕ್ಷ ಮಹಾಲಿಂಗ ಈಶ್ವರಮಂಗಲ ಭಾಗವಹಿಸಿದ್ದರು.

ಸನ್ಮಾನ-ಗೌರವಾರ್ಪಣೆ:
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ
ನಾಟಿವೈದ್ಯ ಮಾನ ಬಂಟ್ರಬೈಲ್,ಯಕ್ಷಗಾನ ಕಲಾವಿದ ಬಣ್ಣದ ಸುಬ್ರಾಯ ಸಂಪಾಜೆ, ಸಮಾಜ ಸೇವಾ ಕ್ಷೇತ್ರದ ಸಾಧನೆಗಾಗಿ ಸುಬ್ಬ ಪಾಟಾಳಿ ಕಾಂತಮಂಗಲ, ನಿವೃತ್ತ ಯೋಧರಾದ ಚಂದ್ರಶೇಖರ ಬೆಳ್ಳಾರೆ, ಲೋಕೇಶ್ ಇರಂತಮಜಲು, ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಆರಕ್ಷಕರಾದ ದಿನೇಶ್ ನಾರ್ಣಕಜೆ, ಸುಳ್ಯ ವಕೀಲರ ಸಂಘದ ಅಧ್ಯಕ್ಷ ನಾರಾಯಣ ಪಾಟಾಳಿ, ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ಕೇರ್ಪಳ, ವಿಜ್ಞಾನಿ ವನಿತಾ ಸಚಿತ್ ಪೆರಿಯಪ್ಪು, ಕ್ರೀಡಾ ಕ್ಷೇತ್ರದಲ್ಲಿ ಮನೋಜ್ ಕುಮಾರ್ ಸೂಂತೂಡು ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಗಾಣಿಗ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಸುರೇಶ್ ಕರ್ಲಪಾಡಿ, ಕೋಶಾಧಿಕಾರಿ ಗೋಪಾಲಕೃಷ್ಣ ಮೊರಂಗಲ್ಲು, ಸಮ್ಮೇಳನ ಸಮಿತಿ ಆರ್ಥಿಕ ಸಮಿತಿ ಸಂಚಾಲಕ ಚಂದ್ರಶೇಖರ ಪನ್ನೆ, ಆಂತರಿಕ ಲೆಕ್ಕ ಪರಿಶೋಧಕ ಮಹಾಲಿಂಗನ್ ಬಾಜರ್ತೊಟ್ಟಿ, ಮಹಿಳಾ ಘಟಕದ ಸದಸ್ಯೆ ಪ್ರೇಮ ಕುಡೆಕಲ್ಲು,ಸ್ವಾಗತ ಸಮಿತಿ ಸಂಚಾಲಕರಾದ ಕೇಶವ ಮೊರಂಗಲ್ಲು,ನಿರ್ದೇಶಕ ರಾಧಾಕೃಷ್ಣ ಬೇರ್ಪಡ್ಕ ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ಸಂಚಾಲಕ ಶಂಕರ ಪಾಟಾಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವೀಣ್ ಜಯನಗರ ಹಾಗೂ ಉಪನ್ಯಾಸಕಿ ಸಾವಿತ್ರಿ ಕಾರ್ಯಕ್ರಮ ನಿರೂಪಿಸಿದರು.
ವಾರ್ಷಿಕ ಮಹಾಸಭೆ:
ಸಮ್ಮಿಲನಕ್ಕೆ ಮುನ್ನ ಸಂಘದ ವಾರ್ಷಿಕ ಮಹಾಸಭೆಯು ಚಂದ್ರಶೇಖರ ಉದ್ದಂತಡ್ಕ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಹಿರಿಯರಾದ ಶಂಕರ ಪಾಟಾಳಿ ಪರಿವಾರಕಾನ, ಅಪ್ಪು ಮಾಸ್ತರ್ ಜಯನಗರ, ಮಹಾಲಿಂಗ ದೇರೆಬೈಲು, ಆಂತರಿಕ ಲೆಕ್ಕ ಪರಿಶೋಧಕ ಮಹಾಲಿಂಗನ್ ಬಾಜರ್ತೊಟ್ಟಿ ಉಪಸ್ಥಿತರಿದ್ದರು.
ಆರೋಗ್ಯ ನಿಧಿ ಹಾಗೂ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಬಳಿಕ ಸುಜಾತಾ ಕಲಾಕ್ಷೇತ್ರ ಮುಳ್ಳೇರಿಅಯ ಇವರ ಶಿಷ್ಯ ವೃಂದದಿಂದ ನೃತ್ಯ ಶಿಲ್ಪಂ ನಡೆಯಿತು.