ಮಂಗಳೂರು: ದ.ಕ. ಜಿಲ್ಲೆಯಲ್ಲಿ ಗಣೇಶ ಹಬ್ಬ ಆಚರಿಸಲು ಅನುಕೂಲವಾಗುವಂತೆ ಸರ್ಕಾರಿ ರಜೆಯನ್ನು ಸೆಪ್ಟೆಂಬರ್18ರ ಬದಲು ಸೆಪ್ಟೆಂಬರ್ 19ರಂದು ನೀಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ದ.ಕ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ರಾಜ್ಯ ಮುಖ್ಯ
ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಕರಾವಳಿಯಲ್ಲಿ ಅದರಲ್ಲೂ ದ.ಕ. ಜಿಲ್ಲೆಯಲ್ಲಿ ಈ ಬಾರಿ ಗಣೇಶ ಹಬ್ಬ ಸೆ. 19ರಂದು ಆಚರಣೆಯಾಗುತ್ತಿದೆ. ಆದರೆ ರಾಜ್ಯ ಸೆಪ್ಟೆಂಬರ್18ರಂದು ಗೌರಿ ಹಬ್ಬಕ್ಕೆ ರಜೆಯನ್ನು ಘೋಷಿಸಿದೆ. ಇದರಿಂದಾಗಿ ಮರುದಿನ ನಡೆಯುವ ಗಣೇಶ ಹಬ್ಬ ಆಚರಣೆಯಿಂದ ಸರ್ಕಾರಿ ನೌಕರರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ವಂಚಿತಗೊಳ್ಳುವಂತಾಗಿತ್ತು.
ಈ ಬಗ್ಗೆ ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗಮನಕ್ಕೆ ತಂದಿದ್ದರು. ಈ ಹಿನ್ನಲೆಯಲ್ಲಿ ರಜೆ ಮಾರ್ಪಾಡು ಮಾಡಲು ಸಚಿಚರು ಸೂಚಿಸಿದ್ದಾರೆ.