ಸುಳ್ಯ: ಸಂಪಾಜೆ ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ಗಳಿಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ.2024 -25ನೇ ಸಾಲಿನ ಗಾಂಧೀ ಗ್ರಾಮ ಪುರಸ್ಕಾರ ಪ್ರಕಟಗೊಂಡಿದ್ದು ಸುಳ್ಯ ತಾಲೂಕು ಮಟ್ಟದ ಗಾಂಧಿ ಗ್ರಾಮ ಪುರಸ್ಕಾರ ಸಂಪಾಜೆ ಗ್ರಾಮ ಪಂಚಾಯತ್ಗೆ ಮತ್ತು
ಕಡಬ ತಾಲೂಕು ಮಟ್ಟದ ಗಾಂಧಿ ಗ್ರಾಮ ಪುರಸ್ಕಾರ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ಗೆ ಲಭಿಸಿದೆ.2024-2025ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ, ರಾಜ್ಯದ ವಿಭಾಗ ಮಟ್ಟದ ಪುರಸ್ಕಾರಕ್ಕೆ 12, ಜಿಲ್ಲಾ ಮಟ್ಟದ ಪುರಸ್ಕಾರಕ್ಕೆ 31 ಹಾಗೂ ತಾಲ್ಲೂಕು ಮಟ್ಟದ ಪುರಸ್ಕಾರಕ್ಕೆ 195
ಪಂಚಾಯತ್ ಗಳು ಸೇರಿದಂತೆ ಒಟ್ಟು 238 ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಲಾಗಿದೆ.ಸಂಪಾಜೆ ಗ್ರಾಮ ಪಂಚಾಯತ್ ಮೂರನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ.
ಈ ಹಿಂದೆ 2014 ರಲ್ಲಿ ಮತ್ತು 2021 ರಲ್ಲಿ ಸಂಪಾಜೆ ಪಂಚಾಯತ್ ಗೆ ಗಾಂಧಿಗ್ರಾಮ ಪುರಸ್ಕಾರ ಲಭಿಸಿತ್ತು. ಮೈಸೂರು ವಿಭಾಗ ಮಟ್ಟದಲ್ಲಿ ದ.ಕ.ಜಿಲ್ಲೆಯ ಮೂಲ್ಕಿ ತಾಲೂಕಿನ ಅತಿಕಾರಿಬೆಟ್ಟು ತೃತೀಯ ಸ್ಥಾನ ಪಡೆದಿದೆ. ದ.ಕ.ಜಿಲ್ಲಾ ಮಟ್ಡದಲ್ಲಿ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮ ಪಂಚಾಯತ್ಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ.









