ಸುಳ್ಯ: ನಗರ ಪಂಚಾಯತ್ ವತಿಯಿಂದ ಗಾಂಧಿಚಿಂತನ ವೇದಿಕೆ, ಗಾಂಧಿನಗರದ ಗಾಂಧಿ ಪಾರ್ಕ್ ಗೆಳೆಯರ ಬಳಗದ ಸಹಕಾರದಲ್ಲಿ ಗಾಂಧಿ ಪಾರ್ಕ್ನ ಗಾಂಧಿ ಕಟ್ಟೆಯಲ್ಲಿ ಗಾಂಧಿ ಪ್ರತಿಮೆಯ ಅನಾವರಣ ಕಾರ್ಯಕ್ರಮ ಅ.ಎರಡರಂದು ನಡೆಯಿತು. ಗಾಂಧಿಚಿಂತನ ವೇದಿಕೆಯ ಸಂಚಾಲಕರಲ್ಲಿ ಓರ್ವರಾದ ಶರೀಫ್ ಕಂಠಿ ನೇತೃತ್ವದ ಗಾಂಧಿ ಪಾರ್ಕ್ ಗೆಳೆಯರ ಬಳಗದ ನೇತೃತ್ವದಲ್ಲಿ ಗಾಂಧಿನಗರದಲ್ಲಿ ಗಾಂಧಿಪಾರ್ಕ್ ನಿರ್ಮಾಣವಾಗಿತ್ತು. ಇದೀಗ ಗಾಂಧಿಪಾರ್ಕ್ನಲ್ಲಿ ಗಾಂಧಿ ಪ್ರತಿಮೆ ಅನಾವರಣ ಮಾಡಲಾಗಿದೆ.ಗಣ್ಯರು ಸೇರಿ ಪ್ರತಿಮೆ ಅನಾವರಣ ಮಾಡಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ, ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್,
ಅಖಿಲ ಭಾರತ
ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್ ನಾಥ್ ಜಿ,ಸೈಂಟ್ ಬ್ರಿಜಿಡ್ ಚರ್ಚ್ನ ಫಾ.ವಿಕ್ಟರ್ ಡಿಸೋಜ, ಗಾಂಧಿನಗರ ಜಮಾಅತ್ ಅಧ್ಯಕ್ಷ ಮಹಮ್ಮದ್ ಕೆ.ಎಂ.ಎಸ್, ಹಿರಿಯ ಪತ್ರಕರ್ತ ಡಾ.ಯು.ಪಿ. ಶಿವಾನಂದ, ಆದಂ ಹಾಜಿ ಕಮ್ಮಾಡಿ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಸೇರಿ ಗಣ್ಯರು ಅನಾವರಣ ನೆರವೇರಿಸಿದರು.
ಶರೀಫ್ ಕಂಠಿ ನೇತೃತ್ವದಲ್ಲಿ ಗಾಂಧಿ ಚಿಂತನ ವೇದಿಕೆಯ ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ್ ಮಾರ್ಗದರ್ಶನದಲ್ಲಿ ಗಾಂಧೀಜಿ ಅವರ ಪ್ರತಿಮೆ ಅನಾವರಣ ಮಾಡಲಾಗಿದೆ.
ಗಾಂಧಿ ವ್ಯಕ್ತಿತ್ವದ, ನಾಯಕತ್ವದ ಪ್ರತೀಕ:ಡಾ.ಕೇನಾಜೆ:
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಗಾಂಧಿ ಚಿಂತನ ನೀಡಿ ಮಾತನಾಡಿದ ಗಾಂಧಿಚಿಂತನ ವೇದಿಕೆಯ ಸಂಚಾಲಕರು ಹಾಗೂ ಲೇಖಕರಾದ ಡಾ.ಸುಂದರ ಕೇನಾಜೆ ‘ಪೌರಾಣಿಕ ಹಾಗೂ ಚಾರಿತ್ರಿಕ ವ್ಯಕ್ತಿತ್ವದ ಹಾಗೂ ನಾಯಕತ್ವದ ಗುಣವನ್ನು ಮಹಾತ್ಮಾ ಗಾಂಧೀಜಿಯವರಲ್ಲಿ ಕಾಣಬಹುದು. ಆದುದರಿಂದ
ಪೌರಾಣಿಕ ಹಾಗೂ ಚಾರಿತ್ರಿಕ ವ್ಯಕ್ತಿತ್ವದ ಮತ್ತು ನಾಯಕತ್ವದ ಪ್ರತೀಕ ಗಾಂಧೀಜಿಯವರು. ಹೊಸ ತಲೆಮಾರು ಗಾಂಧೀಜಿಯವರನ್ನು ಅರಿಯಬೇಕಾದ ಮತ್ತು ಗಾಂಧೀಜಿಯವರನ್ನು ತನ್ನೊಳಗೆ
ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು. ಸತ್ಯ ಮತ್ತು ಅಹಿಂಸೆಯನ್ನು ಬಯಸುವವರು ಎಲ್ಲರೂ ಗಾಂಧೀಜಿಯವರನ್ನು ಒಪ್ಪುತ್ತಾರೆ. ಜಗತ್ತು ಅಚ್ಚರಿಯಿಂದ ನೋಡುವಂತೆ ಬದುಕಿದ ಗಾಂಧೀಜಿಯವರ ಆದರ್ಶ ಇಂದಿನ ಪರಿಸ್ಥಿತಿಯಲ್ಲಿ ಅತ್ಯಂತ ಅಗತ್ಯ ಎಂದರು.
2001ರಲ್ಲಿ ದುಗ್ಗಲಡ್ಕ ಶಾಲೆಯಲ್ಲಿ ಆರಂಭಗೊಂಡ ಗಾಂಧಿಚಿಂತನ ವೇದಿಕೆ ಬಳಿಕ 2006ರಿಂದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಸಮಾನ ಮನಸ್ಕರು ಸೇರಿ ಮುಂದುವರಿಸಲಾಯಿತು. ಇಂದು ವೇದಿಕೆ ವಿಶಾಲವಾಗಿ ಬೆಳೆದು ಗಾಂಧಿ ಪ್ರತಿಮೆ ಸ್ಥಾಪಿಸುವ ತನಕ ಮುಂದುವರಿದಿರುವುದು ಹೆಮ್ಮೆಯ ವಿಚಾರ ಎಂದು ಡಾ.ಕೇನಾಜೆ ಹೇಳಿದರು.
ಗಾಂಧಿ ಚಿಂತನ ವೇದಿಕೆಯ ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಗಾಂಧಿಚಿಂತನ ವೇದಿಕೆಯ ಸಂಚಾಲಕರಾದ ಚಂದ್ರಶೇಖರ ಪೇರಾಲು, ಶಂಕರ ಪೆರಾಜೆ, ಶರೀಫ್ ಕಂಠಿ ಮತ್ತಿತರರು ಉಪಸ್ಥಿತರಿದ್ದರು.ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಕೆ.ಎಸ್.ಉಮ್ಮರ್, ಉನೈಸ್ ಪೆರಾಜೆ, ಖಲಂದರ್ ಎಲಿಮಲೆ, ಇಕ್ಬಾಲ್ ಸುಣ್ಣಮೂಲೆ ಸಹಕರಿಸಿದರು.