ಸುಳ್ಯ:ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು.ಕಾಲೇಜಿನ ಪ್ರಾಂಶುಪಾಲರಾದ ಯಶೋಧ ರಾಮಚಂದ್ರ ಮತ್ತು ಉಪ ಪ್ರಾಂಶುಪಾಲರಾದ ದೀಪಕ್ ವೈ.ಆರ್. ಗಿಡ ನೆಡುವುದರ ಮುಲಕ ಪರಿಸರದ ಪ್ರಾಮುಖ್ಯತೆಯನ್ನು
ವಿವರಿಸಿದರು. ಆಯಿಷತ್ ಶಿಬ ನಿರೂಪಣೆ ಮಾಡಿದರು. ಮನಸ್ವಿ ಮತ್ತು ಅವರ ತಂಡ ಸಾಮೂಹಿಕ ಪರಿಸರಗೀತೆ ಹಾಡಿದರು. ಸಂದೇಶ್
ಸ್ವರಚಿತ ಪರಿಸರ ಗೀತೆಯನ್ನು ಸಂಯೋಜಿಸಿ ಹಾಡಿದರು. ಸಾನಿಕ ರೈ ಪರಿಸರ ಕಯರಿತ ಹಾಡು ಹಾಡಿದರೆ ಸಮೀಕ್ಷಾ ಗೌಡ ವಿಶ್ವ ಪರಿಸರ ದಿನದ ಪ್ರಾಮುಖ್ಯತೆ ತಿಳಿಸಿದರು. ಮ್ಯಾನೇಜಿಂಗ್ ಟ್ರಸ್ಟ್ ಡಾ. ರೇಣುಕಾ ಪ್ರಸಾದ್ ಕೆ ವಿ,ಟ್ರಸ್ಟಿ ಡಾ. ಜ್ಯೋತಿ ಆರ್ ಪ್ರಸಾದ್ ಹಾಗೂ ಕಾಲೇಜಿನ ಸಿಇಒ ಡಾ. ಉಜ್ವಲ್ ಯು ಜೆ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.